Shocking ಬಾಲ್ಯ ವಿವಾಹದ ವಿರುದ್ಧ ಕಾರ್ಯಾಚರಣೆ, ಸಾವಿರಾರು ಮಂದಿಯ ಬಂಧನ, ಒಂದೇ ರಾಜ್ಯದಲ್ಲಿ ಬಂಧಿತರೆಷ್ಟು ಗೊತ್ತಾ?

ನಿಯಮ ಉಲ್ಲಂಘಿಸಿ ವಿವಾಹವಾದ 1,800ಕ್ಕೂ ಅಧಿಕ ಮಂದಿಯ ಬಂಧನ

ಅಸ್ಸಾಂ;ಬಾಲ್ಯವಿವಾಹ ನಿಷೇಧ ಕಾಯ್ದೆಯನ್ನು ಉಲ್ಲಂಘಿಸಿ ವಿವಾಹವಾದವರನ್ನು ಅಸ್ಸಾಂನಲ್ಲಿ ಬಂಧನಗಳು ನಡೆಯುತ್ತಿವೆ.

ಇದುವರೆಗೆ 1,800ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ನಾಗಾವ್ ಜಿಲ್ಲೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಬಾಲ್ಯವಿವಾಹದ ವಿರುದ್ಧ ಅವರ ಸರ್ಕಾರವು ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಮಹಿಳೆಯರ ಮೇಲಿನ ಅಕ್ಷಮ್ಯ ಅಪರಾಧದ ವಿರುದ್ಧ ಶೂನ್ಯ ಸಹಿಷ್ಣುತೆಯ ಮನೋಭಾವದಿಂದ ವರ್ತಿಸುವಂತೆ ನಾನು ಅಸ್ಸಾಂ ಪೊಲೀಸರನ್ನು ಕೇಳಿಕೊಂಡಿದ್ದೇನೆ ಎಂದು ಬಿಸ್ವಾ ಶರ್ಮಾ ಟ್ವೀಟ್ ಮಾಡಿದ್ದಾರೆ.

ಹದಿನೈದು ದಿನಗಳೊಳಗೆ ಅಸ್ಸಾಂನಾದ್ಯಂತ ದಾಖಲಾದ 4,000 ಕ್ಕೂ ಹೆಚ್ಚು ಬಾಲ್ಯ ವಿವಾಹ ಪ್ರಕರಣ ಬೇಧಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಟಾಪ್ ನ್ಯೂಸ್