ಮದರಸಾದಲ್ಲಿ ಶಿರಚ್ಛೇದ ಮಾಡಿದ ರೀತಿ ಬಾಲಕನ ಮೃತದೇಹ ಪತ್ತೆ

ಮದರಸಾದಲ್ಲಿ ಶಿರಚ್ಛೇದ ಮಾಡಿದ ರೀತಿ ಬಾಲಕನ ಮೃತದೇಹ ಪತ್ತೆ

ಅಸ್ಸಾಂ:ಅಸ್ಸಾಂನ ಕ್ಯಾಚಾರ್ ಜಿಲ್ಲೆಯ ಮದರಸಾವೊಂದರ ಹಾಸ್ಟೆಲ್‌ನಲ್ಲಿ 12 ವರ್ಷದ ವಿದ್ಯಾರ್ಥಿಯ ಶಿರಚ್ಛೇದಿತ ಶವ ಭಾನುವಾರ ಪತ್ತೆಯಾಗಿದೆ. ಧೋಲೈ ಪ್ರದೇಶದ ದಾರುಸ್ ಸಲಾಮ್ ಹಫಿಜಿಯಾ ಮದ್ರಸಾದಲ್ಲಿ ಈ ಘಟನೆ ನಡೆದಿದೆ.

ಮೃತನನ್ನು ರಬಿಜುಲ್ ಹುಸೇನ್ ಎಂದು ಪೊಲೀಸರು ಗುರುತಿಸಿದ್ದರು.

ಜಿಲ್ಲೆಯ ದಾರುಸ್ ಸಲಾಂ ಹಫೀಜಿಯಾ ಮದರಸಾದಲ್ಲಿ ಈ ಘಟನೆ ನಡೆದಿತ್ತು. ವಿದ್ಯಾರ್ಥಿ ಹುಸೇನ್ ಶನಿವಾರ ರಾತ್ರಿ ಊಟ ಮುಗಿಸಿ ತನ್ನ ಕೊಠಡಿಗೆ ತೆರಳಿದ್ದ.ಆದರೆ ಭಾನುವಾರ ಬೆಳಿಗ್ಗೆ ಆತನ ರೂಮ್​ ಮೇಟ್​ಗಳು ಮೃತದೇಹವನ್ನು ನೋಡಿ ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ.ವಿಚಾರಣೆಯಲ್ಲಿ ಇದೀಗ ಶಾಲಾ ಶಿಕ್ಷಕ ಅಪರಾಧಿ ಎಂದು ತಿಳಿದುಬಂದಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಕೊಲೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಹಾಸ್ಟೆಲ್ ಕೊಠಡಿಯಲ್ಲಿದ್ದ ಸಹ ವಿದ್ಯಾರ್ಥಿಗಳನ್ನು ಹಾಗೂ ಮದರಸಾದ ಮೂವರು ಶಿಕ್ಷಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು.ಘಟನೆ ಹಿನ್ನಲೆ ಇಡೀ ಮದರಸಾವನ್ನು ಸೀಲ್ ಮಾಡಲಾಗಿದೆ.

ಶಿಕ್ಷಕ ಮೌಸ್ಕಿನ್​ ಮದರಸಾದಿಂದ ಬಾಲಕನಿಗೆ​ ಮನಬಂದಂತೆ ಥಳಿಸಿದ್ದ.ಈ ವಿಚಾರ ಪೋಷಕರಿಗೆ ತಿಳಿದ ನಂತರ, ಮೇಲಧಿಕಾರಿಗಳಿಗೆ ದೂರು ನೀಡಿದ್ದರು. ನಂತರ ಕ್ಷಮೆ ಕೇಳಿ ಪತ್ರ ಬರೆಸಲಾಗಿತ್ತು ಇದೇ ಕಾರಣಕ್ಕೆ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ ಎಂದು ವರದಿಯಾಗಿದೆ.

ಟಾಪ್ ನ್ಯೂಸ್