ಅಸ್ಸಾಂನಲ್ಲಿ ಮದರಸಾಗಳನ್ನು ಮುಚ್ಚಿಸುತ್ತಿರುವ ಸರಕಾರ; ಸಿಎಂ ಹೇಳುವಂತೆ ಈವರೆಗೆ ಎಷ್ಟು ಮದರಸಾಗಳನ್ನು‌ ಬಂದ್ ಮಾಡಲಾಗಿದೆ ಗೊತ್ತಾ?

ಅಸ್ಸಾಂನಲ್ಲಿ ಮದರಸಾಗಳನ್ನು ಮುಚ್ಚಿಸುತ್ತಿರುವ ಸರಕಾರ; ಸಿಎಂ ಹೇಳುವಂತೆ ಈವರೆಗೆ ಎಷ್ಟು ಮದರಸಾಗಳನ್ನು‌ ಬಂದ್ ಮಾಡಲಾಗಿದೆ ಗೊತ್ತಾ?

ಬೆಳಗಾವಿ;ಅಸ್ಸಾಂ ರಾಜ್ಯದಲ್ಲಿ ಈವರೆಗೆ 600 ಮದ್ರಸಾಗಳನ್ನು ಮುಚ್ಚಿಸಿದ್ದೇನೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ.

ಚುನಾವಣೆ ಹಿನ್ನೆಲೆ ಬೆಳಗಾವಿಯ ಶಿವಾಜಿ ಮಹಾರಾಜ್ ಉದ್ಯಾನವನದಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಹಿಮಂತ ಬಿಸ್ವ ಶರ್ಮ, ನನಗೆ ಶಾಲೆ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳು ಬೇಕಿರುವುದರಿಂದ ಎಲ್ಲ ಮದ್ರಸಾಗಳನ್ನು ಮುಚ್ಚಿಸಲು ಬಯಸಿದ್ದೇನೆ.ಈವರೆಗೆ ರಾಜ್ಯದಲ್ಲಿ 600 ಮದ್ರಸಾಗಳನ್ನು ಮುಚ್ಚಿಸಿದ್ದೇನೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಹಾಗೂ ಕಮ್ಯೂನಿಸ್ಟ್ ಪಕ್ಷಗಳು ಭಾರತದ ಚರಿತ್ರೆ ಬಾಬರ್, ಔರಂಗಜೇಬ್ ಮತ್ತು ಶಹಜಹಾನ್ ಅವರದ್ದು ಮಾತ್ರ ಎಂಬಂತೆ ಬಿಂಬಿಸಿವೆ. ಛತ್ರಪತಿ ಶಿವಾಜಿ ಮಹಾರಾಜ್ ಹಾಗೂ ಗುರು ಗೋಬಿಂದ್ ಸಿಂಗ್ ಚರಿತ್ರೆ ಕೂಡಾ ಇದೆ ಎಂದು ಅವರು ಹೇಳಿದ್ದಾರೆ.

ಔರಂಗಜೇಬನ ಕಾಲದಲ್ಲಿ ಬಲವಂತದ ಮತಾಂತರ ಮಾಡುವ ಮೂಲಕ ಸನಾತನ ಸಂಸ್ಕೃತಿಯನ್ನು ಅಳಿಸಿ ಹಾಕುವ ಪ್ರಯತ್ನ ಮಾಡಲಾಗಿತ್ತು.ಮೋದಿ ಕಾಲದಲ್ಲಿ ದೇವಸ್ಥಾನಗಳ ಪುನರ್ ನಿರ್ಮಾಣ ಆಗುತ್ತಿದೆ ಎಂದು ಇದೇ ವೇಳೆ ಅವರು ಹೇಳಿದ್ದಾರೆ.

ಟಾಪ್ ನ್ಯೂಸ್

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮತ್ತೆ ಮುಂದೂಡಿಕೆ;ಪಟ್ಟಿ ಬಿಡುಗಡೆ ವಿಳಂಬವಾಗುತ್ತಿರುವುದೇಕೆ? ಈ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?

ಬೆಂಗಳೂರು;ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ

Developed by eAppsi.com