ಸುಳ್ಯ;ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಬಗ್ಗೆ ಹಂಚಿಕೊಂಡ ನಿಂದನಾತ್ಮಕ ಬರಹವನ್ನು ಅಳಿಸುವಂತೆ ಶಾಸಕರ ಅಭಿಮಾನಿ ಬಳಗ ಪೋಸ್ಡ್ ಹಾಕಿದ ಯುವಕನ ಮನೆಗೆ ತೆರಳಿದ ಘಟನೆ ನಡೆದಿದೆ.ಬಳಿಕ ಪೊಲೀಸರ ಮಧ್ಯಸ್ಥಿಕೆಯಿಂದ ಪ್ರಕರಣ ಇತ್ಯರ್ಥವಾಗಿದೆ.
ಜಯನಗರದ ಯುವಕ ತನ್ನ ಫೇಸ್‌ಬುಕ್‌ನಲ್ಲಿ ಪುತ್ತೂರು ಶಾಸಕರ ವಿರುದ್ಧ ಅವಹೇಳನಕಾರಿ ಬರಹವನ್ನು ಹಂಚಿಕೊಂಡಿದ್ದ.ಇದನ್ನು ಕಂಡ ಶಾಸಕರ ಅಭಿಮಾನಿ ಬಳಗದ ಸದಸ್ಯರು, ಪೋಸ್ಟ್ ಹಾಕಿದವನಿಗೆ ಮೊಬೈಲ್ ಕರೆ ಮಾಡಿ ಬರಹವನ್ನು ಅಳಿಸುವಂತೆ ಸೂಚಿಸಿದ್ದಾರೆ.
ಇದಕ್ಕೆ ಆತ ವಿರೋಧಿಸಿದ್ದು, ಪುತ್ತೂರಿನಿಂದ ಯುವಕನ ಮನೆಗೆ ತೆರಳಿದ ಅಶೋಕ್ ರೈ ಅಭಿಮಾನಿ ಬಳಗದ ಸದಸ್ಯರು, ಬರಹ ಅಳಿಸುವಂತೆ ಆಗ್ರಹಿಸಿದ್ದಾರೆ.ಈ ವೇಳೆ
ಪರಸ್ಪರ ಮಾತಿನ ಚಕಮಕಿ ನಡೆದಿದೆ. ಜನ ಜಮಾಯಿಸತೊಡಗಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಗುಂಪನ್ನು ಚದುರಿಸಿ ಬಳಗದ ಸದಸ್ಯರನ್ನು ಹಾಗೂ ಪೋಸ್ಟ್ ಹಾಕಿದವರನ್ನು ಠಾಣೆಗೆ ಕರೆದೊಯ್ದರು.
ಠಾಣೆಗೆ ಆಗಮಿಸಿದ ಪುತ್ತೂರು ಡಿವೈಎಸ್ಪಿ ಡಾ.ಗಾನಾ ಪಿ.ಕುಮಾರ್ ವಿಚಾರಣೆ ನಡೆಸಿ ಪ್ರಕರಣ ಇತ್ಯರ್ಥ ಪಡಿಸಿದ್ದಾರೆ.ಯುವಕ ಬರಹವನ್ನು ಅಳಿಸಿರುವುದಾಗಿ ತಿಳಿದು ಬಂದಿದೆ.