ಪುತ್ತೂರು;ಐಟಿ ದಾಳಿಯ ಬಗ್ಗೆ ಪುತ್ತೂರಿನ ಬಿಜೆಪಿ ಅಭ್ಯರ್ಥಿ
ಅಶೋಕ್ ಕುಮಾರ್ ರೈ ಪ್ರತಿಕ್ರಿಯೆ ನೀಡಿದ್ದು, ಪುತ್ತೂರಿನ ಜನತೆ ನನಗೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸುತ್ತಿರುವುದನ್ನು ಕಂಡು ಬಿಜೆಪಿ ಈಗಾಗಲೇ ಸೋಲೊಪ್ಪಿಕೊಂಡಿದೆ ಎಂದು ಹೇಳಿದ್ದಾರೆ.
ಬಿಜೆಪಿ ಬೇರೆ ಮಾರ್ಗ ಇಲ್ಲದೆ ಇದೀಗ ಐಟಿ ದಾಳಿ ಮಾಡಿಸಿದ್ದಾರೆ.ಈ ವಿಷಯದಲ್ಲಿಯೂ ಬಿಜೆಪಿ ಸಂಪೂರ್ಣವಾಗಿ ಸೋಲು ಕಂಡಿದೆ ಎಂದು ಹೇಳಿದ್ದಾರೆ.
ನಾನು ಓರ್ವ ತೆರಿಗೆಪಾವತಿದಾರ ಉದ್ಯಮಿ.ವರ್ಷಕ್ಕೆ ಕೋಟ್ಯಂತರ ರೂ.ತೆರಿಗೆ ಕಟ್ಟುತ್ತಿದ್ದೇನೆ.ಬಿಜೆಪಿ ಸೋಲಿನ ಹತಾಶೆಯಿಂದ ಬೆಂಗಳೂರಿನ ನನ್ನ ಮನೆಗೆ ಐಟಿ ದಾಳಿ ನಡೆಸಿದೆ.ಆದರೆ ಅಲ್ಲಿ ಅವರಿಗೆ ಏನೂ ಸಿಕ್ಕಿಲ್ಲ. ಬರಿಗೈಲಿ ಹಿಂತಿರುಗಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಸ್ಪಷ್ಟನೆ ನೀಡಿದ್ದಾರೆ.
ಮೈಸೂರಿನಲ್ಲಿ ಸಹೋದರನ ಮನೆಗೆ ಐಟಿ ದಾಳಿ ನಡೆದಿದೆ. ಅವರ ವ್ಯವಹಾರವೇ ಬೇರೆ, ನನ್ನ ವ್ಯವಹಾರವೇ ಬೇರೆ. ಅವರೂ ಓರ್ವ ತೆರಿಗೆ ಪಾವತಿದಾರ. ಅದಕ್ಕೂ ನನಗೂ ಯಾವ ಸಂಬಂಧವೂ ಇಲ್ಲ ಎಂದು ಅಶೋಕ್ ಕುಮಾರ್ ರೈ ಹೇಳಿದ್ದಾರೆ.