ಅಸ್ಸಾಂ ಬ್ಲಾಸ್ಟ್ ಪ್ರಕರಣ: 6 ಆರೋಪಿಗಳು ಖುಲಾಸೆ, 13 ಶಾಲಾ ಮಕ್ಕಳು ಮೃತಪಟ್ಟ ಪ್ರಕರಣದಲ್ಲಿ ಸಂತ್ರಸ್ತ ಕುಟುಂಬ ಹೇಳುವುದೇನು ಗೊತ್ತಾ?

ಅಸ್ಸಾಂನಲ್ಲಿ 13 ಶಾಲಾ ಮಕ್ಕಳು ಸೇರಿದಂತೆ 18 ಮಂದಿಯ ಹತ್ಯೆ ನಡದಿದ್ದ ಬಾಂಬ್ ಸ್ಫೋಟದ ಎಲ್ಲಾ ಆರು ಅಪರಾಧಿಗಳನ್ನು ಗುಹಾಟಿ ಹೈಕೋರ್ಟ್ ಖುಲಾಸೆಗೊಳಿಸಿದೆ.

2004ರಲ್ಲಿ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ದೇಮಾಜಿಯಲ್ಲಿ ಸ್ಫೋಟ ನಡೆದಿದ್ದು, ಕೇಸ್ ಗೆ ಸಂಬಂಧಿಸಿ 2019ರಲ್ಲಿ ಆರು ಮಂದಿಗೆ ಶಿಕ್ಷೆ ವಿಧಿಸಲಾಗಿತ್ತು.

ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್ (ಉಲ್ಫಾ) ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು. ಘಟನೆಯಲ್ಲಿ 18 ಜೀವಗಳು ಬಲಿಯಾಗಿದ್ದು,40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

2019ರಲ್ಲಿ, ಧೇಮಾಜಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿ ಲೀಲಾ ಗೊಗೊಯ್, ದೀಪಾಂಜಲಿ ಬುರಾಗೊಹೈನ್, ಮುಹಿ ಹಂಡಿಕ್ ಮತ್ತು ಜತಿನ್ ದುಬೊರಿ ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು ಮತ್ತು ಪ್ರಶಾಂತ ಭುಯಾನ್ ಮತ್ತು ಹೇಮೆನ್ ಗೊಗೊಯ್ ಅವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು.

ಈ ತೀರ್ಪನ್ನು ಅಪರಾಧಿಗಳು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಗುವಾಹಟಿ ಹೈಕೋರ್ಟ್,ತನ್ನ ಆದೇಶದಲ್ಲಿ,ಆರು ಜನರನ್ನು ಖುಲಾಸೆಗೊಳಿಸಿ ತೀರ್ಪನ್ನು ನೀಡಿದೆ.

ಹೈಕೋರ್ಟ್ ತೀರ್ಪಿನಿಂದ ಸಂತ್ರಸ್ತ ಕುಟುಂಬವು ಅಸಮಾಧಾನಗೊಂಡಿದ್ದು,ಕೋರ್ಟ್ ನಮಗೆ ನ್ಯಾಯ ನೀಡುತ್ತದೆ ಎಂದು ನಾವು ನಿರೀಕ್ಷಿಸಿದ್ದೇವೆ ಆದರೆ ಎಲ್ಲಾ ಅಪರಾಧಿಗಳನ್ನು ಖುಲಾಸೆಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಇನ್ನೋರ್ವ ಸಂತ್ರಸ್ತ ಕುಟುಂಬ ಆರೋಪಿಗಳಿಗೆ ಶಿಕ್ಷೆಯಾದ 4ನೇ ವರ್ಷಕ್ಕೆ ಬಿಡುಗಡೆಯಾಗಿದೆ ಎಂದು ಹೇಳಿದ್ದಾರೆ‌.

ಟಾಪ್ ನ್ಯೂಸ್