ಪುತ್ತೂರು:ಪುತ್ತೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿರುವ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಾಗ್ದಾಳಿ ನಡೆಸಿದ್ದಾರೆ.
ಕಲ್ಲಡ್ಕ ಪ್ರಭಾಕರ್ ಭಟ್ ಮಾಧ್ಯಮ ಜೊತೆ ಮಾತನಾಡಿ ಪುತ್ತೂರು ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ಯಾವ ಸೀಮೆಯ ಹಿಂದುತ್ವವಾದಿ ಎಂದು ಪ್ರಶ್ನಿಸಿದ್ದಾರೆ.
ದೇವಸ್ಥಾನದ ದುಡ್ಡು ಹೊಡೆದ, ಹಿಂದುಗಳ ಮೇಲೆಯೇ ದೌರ್ಜನ್ಯ ನಡೆಸಿದ ವ್ಯಕ್ತಿ, ಗೋ ಸಾಗಾಟ ಮಾಡುವಾಗ ಹಿಂದೂ ಸಂಘಟನೆಯ ಕಾರ್ಯಕರ್ತರು ತಡೆದಾಗ ಅರುಣ್ ಕೂಡಾ ಅದರಲ್ಲಿ ಒಬ್ಬನಾಗಿದ್ದ ಅಷ್ಟೇ ಎಂದು ಹೇಳಿದ್ದಾರೆ.
ಅದು ಬಿಟ್ಟು ಬೇರೆ ಹಿಂದುತ್ವದ ಕಾರ್ಯ ಅವನಿಂದ ನಡೆಯಲಿಲ್ಲ, ಕೇಂದ್ರದ ಗೃಹಸಚಿವ ಅಮಿತ್ ಶಾ ಮಾತನಾಡುವುದಾಗಿ ಹೇಳಿದಾಗ ಧಿಕ್ಕರಿಸಿದ ವ್ಯಕ್ತಿ ಅರುಣ್ ಪುತ್ತಿಲ, ಕಾರ್ಯಕರ್ತರು ಕೆಲವರು ಈ ವಿಚಾರ ತಿಳಿಯದೆ ಅವನ ಹಿಂದೆ ಓಡಾಡುತ್ತಿದ್ದಾರೆ.
ಪುತ್ತಿಲ ಬೆನ್ನ ಹಿಂದೆ ಓಡುವವರಿಗೆ ಸದ್ಯದಲ್ಲೇ ಈ ವಿಚಾರ ತಿಳಿಯಲಿದೆ ಎಂದು ಪ್ರಭಾಕರ್ ಭಟ್ ಹೇಳಿದ್ದಾರೆ.