ಹಸಿವಿನಿಂದ ಸತ್ತವರು…

hunger

ಜಾಗತಿಕ ಹಸಿವು ಸೂಚ್ಯಂಕ ವರದಿ  “ನಮ್ಮ” ಹಸಿವನ್ನು ವಿಶ್ವದ ಮುಂದೆ ತೆರೆದಿಟ್ಟಿದೆ. ವಿಶ್ವದ ಮುಂದೆ ಭಾರತದ ಹಸಿವಿನ ಪುಟವನ್ನು ತೆರೆದಿಟ್ಟ ವರದಿ ಪ್ರಕಟಣೆಯಾದ ಒಂದೆರಡು ದಿನಕ್ಕೆ ತಣ್ಣಗಾಗಿದೆ. ವರದಿ ಬಗ್ಗೆ ತಲೆಕೆಡಿಸಿಕೊಳ್ಳುವ ಅನಿವಾರ್ಯತೆ ಜನಪ್ರತಿನಿಧಿಗಳಿಗೆ ಇಲ್ಲವಾದರೆ, ಬುದ್ದಿಜೀವಿಗಳು ಆ ಬಗ್ಗೆ ಯೋಚಿಸಲು ಹೋಗುವುದಿಲ್ಲ.ಯಾಕೆಂದರೆ ಭಾರತದ ಆಡಳಿತ, ಜನಾಭಿಪ್ರಾಯ, ಸಾಮಾಜ ಎಲ್ಲವೂ 4ಜಿ ಇಂಟರ್ ನೆಟ್ ನಿಂದ ಆರಂಭವಾಗಿ ದ್ವೇಷ, ಜಾತಿ, ಧರ್ಮ, ಗೋವು, ಗೋಡ್ಸೆ, ಭಯೋತ್ಪಾದನೆ, ಪೌರತ್ವ ಇವುಗಳ ಸುತ್ತವೇ ಸುತ್ತುತ್ತಿದೆ.

ಲಾಕ್ ಡೌನ್ ವೇಳೆ ದೆಹಲಿಯ ಬೀದಿಯಲ್ಲಿ ಓರ್ವ 40ರ ಹರೆಯದ ವ್ಯಕ್ತಿ ಮಣ್ಣು ತಿಂದ. ಆತನ ವೈರಲ್ ವಿಡಿಯೋ ಶೇರ್ ಮಾಡಿದಷ್ಟು ಆತ ಮಣ್ಣು ತಿನ್ನಲು ಕಾರಣವಾದ ವ್ಯವಸ್ಥೆ ಬಗ್ಗೆ ಚರ್ಚಿಸಿಲ್ಲ. ಬುಕಲ್ ಘಾಸಿ ಎಂಬ ವ್ಯಕ್ತಿ ಜಾರ್ಕಾಂಡ್ನಲ್ಲಿ ಹಸಿವಿನಿಂದ ಸತ್ತ. ಈತನಲ್ಲಿ ದಾಖಲೆ ಇಲ್ಲ ಎಂದು ಜಿಲ್ಲಾಡಳಿತ ಈತನಿಗೆ ಪಡಿತರ ಕೊಟ್ಟಿರಲಿಲ್ಲ. ದೆಹಲಿಯ ಮಂಡವಾಲಿ ಪ್ರದೇಶದಲ್ಲಿ ಮೂವರು 4,6,7 ಕ್ರಮ ವರ್ಷದ ಸಹೋದರಿಯರು ಹಸಿವಿನಿಂದ ಮನೆಯಲ್ಲಿ ನರಳಿ ಸತ್ತರು. ಬಿಹಾರದ ಹರಾ ಜಿಲ್ಲೆಯಲ್ಲಿ 11ವರ್ಷದ ದಲಿತ ಬಾಲಕ ಹಸಿವಿನಿಂದ ಕೊರೊನಾ ಮಧ್ಯೆ ಸತ್ತ ಈ ಬಗ್ಗೆ ಸಚಿವಾಲಯದ ಬಳಿ ದಾಖಲೆ ಇಲ್ಲ. ಕುಟುಂಬಸ್ಥರು ಯಾರಲ್ಲಿ ಈ ಅನ್ಯಾಯದ ಸಾವಿಗೆ ನ್ಯಾಯ ಕೇಳಬೇಕು? ಭಾರತ ಸರಕಾರದ ಬಳಿ ಈ ಮಾಹಿತಿ ಇಲ್ಲ ಎಂದ ಮಾತ್ರಕ್ಕೆ ಅದು ಅವಾಸ್ತವ ಅಲ್ಲ. ಯಾಕೆಂದರೆ ಅದೇ ಗ್ಲೋಬಲ್ ಪವರ್ಟಿ ಇಂಡೆಕ್ಸ್ ತೆರೆದಿಟ್ಟ ಸೂಚ್ಯಾಂಕ ಇದರ ಸಾರಾಂಶವಾಗಿದೆ.

‘ಮಾನವ’ ಎನ್ನುವುದು ಒಂದು ದೇಶದ ಸಂಪತ್ತು. ಈ ಸಂಪತ್ತನ್ನು ಯಾವ ರೀತಿ ಬಳಕೆ ಮಾಡುತ್ತೇವೆ ಅದರ ಮೇಲೆ ದೇಶ ನಿಂತಿದೆ. ಚೀನಾ ಮಾನವ ಸಂಪತ್ತನ್ನು ಸಮರ್ಪಕವಾಗಿ ಬಳಕೆ ಮಾಡಿ ವಿಶ್ವದ ಹಸಿವಿಲ್ಲದ ರಾಷ್ಟ್ರಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಆದರೆ ಭಾರತದಲ್ಲಿ ಮಾನವ ಸಂಪತ್ತು ಹೇಗೆ ಬಳಕೆಯಾಗುತ್ತಿದೆ ಎನ್ನುವುದನ್ನು ವಿಶ್ವದ ಹಸಿವು ಸೂಚ್ಯಂಕ ವರದಿಯು ಸೂಚಿಸುತ್ತದೆ. ವಿಶ್ವದ 107ದೇಶಗಳ ಪಟ್ಟಿಯಲ್ಲಿ 94ನೇ ಸ್ಥಾನದಲ್ಲಿ ಭಾರತ ಇದೆ. ವಿಶ್ವದ ಅತಿ ಕಡು ಬಡ ರಾಷ್ಟ್ರಗಳ ಸಾಲಿನ ಭಾರತದ ಈ ರಿಸಲ್ಟ್, ನಿಜಕ್ಕೂ ಶೋಚನೀಯವೇ  ಅಲ್ವ.. ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳದಂತಹ ನೆರೆಯ ರಾಷ್ಟ್ರಗಳಿಗಿಂತಲೂ ಭಾರತದ ಸ್ಥಿತಿ ಶೋಚನೀಯವಾಗಿದೆ. ಪಾಕಿಸ್ತಾನದ ಹಸಿವು ಸೂಚ್ಯಂಕ ಪಟ್ಟಿಯಲ್ಲಿ 88, ನೇಪಾಲ 73, ಬಾಂಗ್ಲಾ 75, ಶ್ರೀಲಂಕಾ 64ನೇ ಸ್ಥಾನದಲ್ಲಿದ್ದು ತೃಪ್ತಿದಾಯಕವಾಗಿದೆ. ಈ ಎಲ್ಲಾ ರಾಷ್ಟ್ರಗಳಿಗಿಂತ ಬಲಿಷ್ಟ ರಾಷ್ಟ್ರ ಭಾರತಕ್ಕೆ ಈ ವರದಿ ಅವಮಾನ ಅಲ್ವ?

4,000 ಕೋಟಿ ಖರ್ಚು ಮಾಡಿ ಅತ್ಯಂತ ಎತ್ತರದ ಪ್ರತಿಮೆ ನಿರ್ಮಿಸಿದ ಭಾರತದಲ್ಲಿ 14% ಜನರು ಹಸಿವಿನಿಂದಿದ್ದಾರೆ. ಭಾರತದಲ್ಲಿ ಪ್ರತಿ ವರ್ಷ 1.4 ಮಿಲಿಯನ್ ಮಕ್ಕಳು 5ವರ್ಷಕ್ಕಿಂತ ಮೊದಲು ಅಪೌಷ್ಟಿಕತೆಯಿಂದ ಸಾಯುತ್ತಾರೆ. 61 ದಶಲಕ್ಷ ಮಕ್ಕಳು ಸೇರಿದಂತೆ 200 ದಶಲಕ್ಷಕ್ಕೂ ಹೆಚ್ಚು ಜನರಿಗೆ ದಿನನಿತ್ಯದ ಆಹಾರವಿಲ್ಲ. 7.8 ಮಿಲಿಯನ್ ಶಿಶುಗಳು 2.5 ಕಿಲೋಗ್ರಾಂಗಳಿಗಿಂತ ಕಡಿಮೆ ತೂಕವನ್ನು ಜನನದ ವೇಳೆ ಹೊಂದಿದೆ. ಇವೆಲ್ಲಾ ಮನಕಳಕುವ ವರದಿ. ಆದ್ರೆ ಇದು ರಿಪೋರ್ಟ್ ಗೆ ಮಾತ್ರ ಸೀಮಿತವಾಗಿದೆ.

ಯಾಕೆಂದರೆ ಭಾರತ ಎಂದರೆ ಮಧ್ಯಮ, ಶ್ರೀಮಂತರು ಮಾತ್ರ ಎನ್ನುವ ಕಲ್ಪನೆ ಇದೆ. ಇಲ್ಲದಿದ್ರೆ ಯಾಕೆ ಸ್ವಾತಂತ್ರ ಭಾರತದಲ್ಲಿ ಅಧಿಕಾರಕ್ಕೆ ಬಂದ ಯಾವ ಸರಕಾರ ಕೂಡ ಬಡತನವನ್ನು ಗಂಭೀರವಾಗಿ ಪರಿಗಣಿಸಿಲ್ಲ? ಸುಮತಿ ಭಾರ್ಗವನ ಮನಸ್ಮೃತಿ ಆಧಾರಿತ ನ್ಯಾಯ ಆದ್ರೆ ಇದು ನಿಜಕ್ಕೂ ವಾಸ್ತವ ಮತ್ತು ನಿರ್ಲಕ್ಷಿಸಲ್ಪಡುವ ವಿಚಾರವೆ ಬಿಡಿ. ಆದ್ರೆ ಭಾರತ ಪ್ರಜಾ ಪ್ರಭುತ್ವ ರಾಷ್ಟ್ರ್ರ. ಹುಟ್ಟಿದ ಪ್ರತಿಯೊಬ್ಬನು ಸಮಾನತೆಯಿಂದ , ಬದುಕಲು, ತಿನ್ನಲು, ಅರ್ಹ. ಆದ್ರೆ ವಾಸ್ತವ ವಿಭಿನ್ನವಾಗಿದೆ.

ಸರಕಾರ ತ್ರಿವಳಿ ತಲಾಕ್, ಪೌರತ್ವ, ಲವ್ ಜಿಹಾದ್ ನ್ನು ಪರಿಗಣಿಸಿದಷ್ಟು ಗಂಭೀರವಾಗಿ ಹಸಿವನ್ನು- ಬಡತನವನ್ನು ಪರಿಗಣಿಸಿಲ್ಲ. ಬಡತನ ನಿವಾರಣಾ ಕ್ರಮಗಳನ್ನು ಚರ್ಚಿಸುವುದಿಲ್ಲ, ಸಂಸತ್ತಿನಲ್ಲಿ ಜಾತಿ-ಧರ್ಮ ಆಧಾರಿತ ವಿಚಾರ ಚರ್ಚಿಸುವಷ್ಟು ಹಸಿವು, ಅಪೌಷ್ಟಿಕತೆ, ಬಡತನದ ಬಗ್ಗೆ ಚರ್ಚಿಸುವುದಿಲ್ಲ. ಕೈಗಾರಿಕಾ ಮಸೂದೆಗಳು, ಮದ್ಯಮ, ಬೃಹತ್ ಉದ್ಯಮ, ನಗರೀಕರಣ, ಪ್ರತಿಮೆ  ಇವುಗಳ ಸುತ್ತವೇ ಸದನ ಸುತ್ತಿ, ಗದ್ದಲ-ಗಲಾಟೆ ಮಧ್ಯೆ ಮುಗಿದು ಬಿಡುತ್ತದೆ.

ಬಜೆಟ್ ಗಳಲ್ಲಿ ಘೋಷಿಸುವ ಕಲ್ಯಾಣ ಕ್ರಮಗಳು ಎಷ್ಟು ಕಡುಬಡವರಿಗೆ ತಲುಪಿದೆ? ಬಡವರಿಗೆ ಹಸಿವು ನೀಗಿಸುವ ದೃಷ್ಟಿಯಿಂದ ಜಾರಿಗೆ ತಂದ ಪಡಿತರ ವ್ಯವಸ್ಥೆ ಎಷ್ಟು ಜನರಿಗೆ ತಲುಪಿದೆ. ಅವಿದ್ಯಾವಂತರಿಗೆ ಪಡಿತರ ಎಂದರೆ ಏನು ಎಂದು ಗೊತ್ತೇ? ಪಡಿತರ ಚೀಟಿ ಹೊಂದಿರುವವರು ಮಾತ್ರ ಬಡವರೇ? ಅವರಿಗೆ ರೇಷನ್ ಕೊಟ್ಟರೆ ಸಾಕೇ. ಪಡಿತರ ವ್ಯವಸ್ಥೆ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲದ ಯುಪಿ, ಬಿಹಾರಿಗಳ ಪಾಡೇನು? ಇಂದು ಕೂಡ ಬಿಹಾರ, ಮಧ್ಯಪ್ರದೇಶ, ಉತ್ತರಪ್ರದೇಶದಂತಹ ರಾಜ್ಯಗಳ ಹಳ್ಳಿ ಗಾಡಿನ ಪ್ರದೇಶಗಳಲ್ಲಿ ಜನರಿಗೆ ಕನಿಷ್ಠ ರೇಷನ್ ಕಾರ್ಡ್ ಗಳ ಬಗ್ಗೆ ಕೂಡ ಮಾಹಿತಿ ಇಲ್ಲ. ಅವರು ಹುಲ್ಲು, ಇಲಿ, ಪ್ರಾಣಿಗಳನ್ನು ತಿಂದುಕೊಂಡು ಶಾಪಗ್ರಸ್ಥವಾಗಿ ಜೀವನ ಸಾಗಿಸುತ್ತಿದ್ದಾರೆ. ಉತ್ತರ ಪ್ರದೇಶ ದೇಶದಲ್ಲಿ ಅತಿಹೆಚ್ಚು ಜನಸಂಖ್ಯೆ ಇರುವ ರಾಜ್ಯ. ಬಿಹಾರ, ಯುಪಿ, ಮಧ್ಯಪ್ರದೇಶ ಈ ರಾಜ್ಯಗಳು ದೇಶದ ಹಸಿವು ಸೂಚ್ಯಂಕದ ರಿಪೋರ್ಟ್ ನ್ನು ನಿರ್ಧರಿಸುವ ರಾಜ್ಯಗಳು. ಈ ರಾಜ್ಯಗಳಲ್ಲಿ ಆಹಾರ, ಕುಡಿಯುವ ನೀರಿಗಾಗಿ ಜನ ನರಳುತ್ತಿದ್ದಾರೆ. ಅವರಿಗೆ ಯಾವ ಸರಕಾರವೂ ತಲುಪಿಲ್ಲ. ಇದು ಮಾನವ ಹಕ್ಕುಗಳ ಉಲ್ಲಂಘನೆಯಲ್ಲವೇ? ಇಂತಹವರ ಬಗ್ಗೆ ಜಿಲ್ಲಾಡಳಿತ ನಿಗಾವಹಿಸಬೇಡ್ವ? ಕನಿಷ್ಠ ಪಕ್ಷ ಪೌರತ್ವ ಇಲ್ಲದವರೆಂದು ಹೇಳಿಯಾದರೂ ಬಂಧನ ಕೇಂದ್ರದಲ್ಲಿಟ್ಟು ಮೂರು ಹೊತ್ತಿನ ಊಟ ಹಾಕಬಹುದಲ್ವ? ಯಾಕೆ ಈ ಪ್ರಶ್ನೆ ಎಂದರೆ ಈ ಹಸಿವು ಎನ್ನುವುದು ಏಡ್ಸ್, ಮಲೇರಿಯಾ, ಟ್ಯುಬರ್ ಕ್ಯುಲೋಸಿಸ್ ನಂತಹ ಮಾರಕ ರೋಗಕ್ಕಿಂತಲೂ ಅಪಾಯಕಾರಿ. ಇದನ್ನು ಹಸವಿನಿಂದ ಸತ್ತವರ ಸಂಖ್ಯೆಗೂ- ಈ ಮಾರಕದಿಂದ ಸತ್ತವರ ಸಂಖ್ಯೆ ಜೊತೆ ತುಲನೆ ಮಾಡಿದಾಗ ಮನವರಿಕೆಯಾಗುತ್ತದೆ.

ಭಾರತದ ಪಾರ್ಲಿಮೆಂಟ್, ರಾಜ್ಯ ಸದನಗಳಲ್ಲಿ ಕಾರ್ಪೋರೇಟ್ ಪರ ಬಿಲ್ ಗಳು ಪಾಸ್ ಆಗುತ್ತಿದೆ. ಖಾಸಗೀಕರಣದ ಮೂಲಕ ಬಡವರ ಹೊಟ್ಟೆಗ ಕನ್ನಹಾಕುವ ಕೆಲಸವನ್ನುಮಾಡಲಾಗುತ್ತಿದೆ.ಕಾರ್ಪೋರೇಟ್ ಉದ್ಯಮಗಳಿಗೆ ಬೇಕಾದಷ್ಟು ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ. ಆದ್ರೆ ಯಾಕೆ ಬಡವರ ಬಗ್ಗೆ ಸರಕಾರಕ್ಕೆ ಯೋಚನೆ ಇಲ್ಲ. ಯಾಕೆಂದ್ರೆ ದೇಶದಲ್ಲಿ ಹಸಿವಿನಿಂದ ಸಾಯುವವರು ಎಲ್ಲರೂ ಕೂಡ ಕೆಳವರ್ಗದ ದಲಿತರು, ಆದಿವಾಸಿಗಳು, ಕಾಡು ಜನಾಂಗದ ಜನರು, ಸ್ಲಮ್ ಗಳಲ್ಲಿ ಕೊಳಚೆ ಪ್ರದೇಶಗಳಲ್ಲಿ ಹಳ್ಳಿಗಾಡುಗಳಲ್ಲಿ ಬದುಕುವವರು. ಇವರು ನಾಗರಿಕ ಸಮಾಜದಿಂದ ದೂರ ಇರುವವರು. ಮತ್ತು ಅವರನ್ನು ದೂರವಿಟ್ಟಿರುವುದು ನಾವೇ ಆಗಿದೆ.

ಭಾರತದಲ್ಲಿ ಯಾವ ಸರಕಾರಗಳು ಕೂಡ ಯಶಸ್ವಿಯಾಗಿ ಬಡತವನ್ನು ನಿಭಾಯಿಸಿಲ್ಲ. ಆದರೆ ಮೋದಿ ಆಡಳಿತದಲ್ಲಿ ಇದು ದಯಾನೀಯ ಪರಿಸ್ಥತಿಗೆ ಬಂದು ತಲುಪಿದೆ. ಬಡವರನ್ನು ಕಡು ಬಡತನಕ್ಕೆ ತಳ್ಳಿದೆ. ಎನ್ ಡಿಎ ಸರಕಾರದ ತಪ್ಪಾದ ಆರ್ಥಿಕ ನಿರ್ಧಾರಗಳು ಬಲು ಗಂಭೀರವಾದುದು. ಟ್ಯಾಕ್ಸ್ ಗಳಿಂದ ಜನರಿಗೆ ಆಹಾರವನ್ನು ಕೊಂಡು ಕೊಳ್ಳಲು ಸಾಧ್ಯವಾಗುತ್ತಿಲ್ಲ. ಯುವ ಸಮುದಾಯಕ್ಕೆ ಉದ್ಯೋಗವೇ ಇಲ್ಲ. ಖಾಸಗೀಕರಣದಿಂದಾಗಿ ಉದ್ಯೋಗ ಕಳೆದುಕೊಳ್ಳುವಂತಾಗಿದೆ. ಇದ್ಯಾವುದರ ಬಿಸಿ ದೇಶದ ಮೇಲ್ವರ್ಗದ ಮಧ್ಯಮ ವರ್ಗದ ಜನರಿಗೆ ತಟ್ಟಿಲ್ಲ. ಆದ್ದರಿಂದ ಜನರು ಇವತ್ತು ಭಾರತವನ್ನು ವಿಶ್ವಗುರು ಎನ್ನುತ್ತಿರುವುದು. ಯಾಕೆಂದರೆ ಈ ಹಸಿವಿನಿಂದ ಸಾಯುವವರಲ್ಲಿ ತಮ್ಮ ನೋವನ್ನು  ಹೇಳಿಕೊಳ್ಳಲು ವಾಟ್ಸಪ್ , ಪೇಸ್ಬುಕ್, ಮೊಬೈಲ್ ಯಾವುದೂ ಇಲ್ಲ. ಅದಕ್ಕೆ ಮಧ್ಯಮ ವರ್ಗದ ಜನರು ಜಾಣ ಕುರುಡುತನ ಪ್ರದರ್ಶಿಸುವುದು.

nep

ರಾಷ್ಟ್ರೀಯ ಶಿಕ್ಷಣ ನೀತಿ

ರಾಷ್ಟ್ರೀಯ ಶಿಕ್ಷಣ ನೀತಿ(ಎನ್ ಇಪಿ) ಜಾರಿಗೆ ಕೇಂದ್ರ ಸರಕಾರ ಮುಂದಾಗಿದೆ. ಸಂಪುಟದಲ್ಲಿ ಈ ಕುರಿತ ಒಪ್ಪಿಗೆಯನ್ನು ಪಡೆದುಕೊಂಡಿದೆ. ನೂತನ ಶಿಕ್ಷಣ

Read More »
hunger

ಹಸಿವಿನಿಂದ ಸತ್ತವರು…

ಜಾಗತಿಕ ಹಸಿವು ಸೂಚ್ಯಂಕ ವರದಿ  “ನಮ್ಮ” ಹಸಿವನ್ನು ವಿಶ್ವದ ಮುಂದೆ ತೆರೆದಿಟ್ಟಿದೆ. ವಿಶ್ವದ ಮುಂದೆ ಭಾರತದ ಹಸಿವಿನ ಪುಟವನ್ನು ತೆರೆದಿಟ್ಟ

Read More »