ಕತಾರ್‌ನಲ್ಲಿ ನಡೆದ 2022ರ ಫಿಫಾ ವಿಶ್ವಕಪ್ ಪಂದ್ಯಾಟದಲ್ಲಿ
ಅರ್ಜೆಂಟೀನಾ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿ 1986ರ ಬಳಿಕ ಹೊಸ ಇತಿಹಾಸ ನಿರ್ಮಿಸಿದೆ.
ತನ್ನ ಜೀವನದ ಕೊನೆಯ ವಿಶ್ವಕಪ್ ಪಂದ್ಯ ಆಡಿರುವ ಪುಟ್ಭಾಲ್ ಜಗತ್ತಿನ ಮಾಂತ್ರಿಕ ಆಟಗಾರ ಲಿಯೋನಲ್ ಮೆಸ್ಸಿ ವಿಶ್ವಕಪ್ ಗೆಲುವಿನ ಕನಸನ್ನು ನನಸುಗೊಳಿಸಿದ್ದಾರೆ.
ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಫೈನಲ್ನಲ್ಲಿ ಫ್ರಾನ್ಸ್ ತಂಡವನ್ನು ಮಣಿಸುವ ಮೂಲಕ ಅರ್ಜೆಂಟೀನಾ 3ನೇ ಬಾರಿಗೆ ಫಿಫಾ ಕಿರೀಟಕ್ಕೆ ಮುತ್ತಿಕ್ಕಿದೆ.
ಪಂದ್ಯದಲ್ಲಿ ಅರ್ಜೆಂಟೀನಾದ ಮೆಸ್ಸಿ ಗೋಲ್ಡನ್ ಬಾಲ್ ಪಡೆದರೆ, ಪ್ರಾನ್ಸ್ ತಂಡದ ಎಂಬಾಪೆ ಗೋಲ್ಡನ್ ಶೂ ಪಡೆದು ಇತಿಹಾಸ ನಿರ್ಮಿಸಿದ್ದಾರೆ.
ಜಗತ್ತಿನಲ್ಲೇ ಸಂಭ್ರಮಿಸಲ್ಪಟ್ಡ ಈ ಕ್ರೀಡಾ ಹಬ್ಬದ ಚಾಂಪಿಯನ್ ಅರ್ಜೆಂಟೀನಾ ತಂಡಕ್ಕೆ 42 ಮಿಲಿಯನ್ ಡಾಲರ್ ಅಂದರೆ ಅಂದಾಜು 344 ಕೋಟಿ ರೂಪಾಯಿ ಬಹುಮಾನದ ರೂಪದಲ್ಲಿ ಸಿಗಲಿದೆ.ರನ್ನರ್ಅಪ್ ತಂಡ ಫ್ರಾನ್ಸ್ಗೆ 245 ಕೋಟಿ ಬಹುಮಾನ ಪಡೆಯಲಿದೆ.
ಅದೇ ರೀತಿ 3ನೇ ಸ್ಥಾನ ಪಡೆದಿರುವ ಕ್ರೊಯೇಷಿಯಾ 220 ಕೋಟಿ ಸಂಭಾವನೆ ಪಡೆದರೆ 4ನೇ ಸ್ಥಾನದಲ್ಲಿರುವ ಮೊರಾಕೊ 204 ಕೋಟಿ ಹಣವನ್ನು ಬಹುಮಾನವನ್ನಾಗಿ ಪಡೆಯಲಿದೆ.
ಒಟ್ಟಾರೆ ತಂಡಗಳಿಗೆ ಸುಮಾರು 3600 ಕೋಟಿ ರೂಪಾಯಿ ಬಹುಮಾನ ಕೊಡಲಾಗಿದೆ.