ಸಮುದ್ರದಲ್ಲಿ ಇದ್ದ ದರ್ಗಾ ರೀತಿಯ ಆಕೃತಿಯನ್ನು ನೆಲಸಮ ಮಾಡಿದ ಪಾಲಿಕೆ ಅಧಿಕಾರಿಗಳು
ಮುಂಬೈ;ಮಹೀಮ್ ಪ್ರದೇಶದ ಅರೇಬಿಯನ್ ಸಮುದ್ರದ ಬೀಚ್ ನಲ್ಲಿ ಅಕ್ರಮ ಎಂದು ದರ್ಗಾ ರೀತಿಯ ಆಕೃತಿಯನ್ನು ಬೃಹತ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ನೆಲಸಮಗೊಳಿಸಿದೆ.
ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರು ಬುಧವಾರ ಸಂಜೆ ಶಿವಾಜಿ ಪಾರ್ಕ್‌ನಲ್ಲಿ ಮಾಡಿದ ಭಾಷಣದಲ್ಲಿ ಅಕ್ರಮವಾಗಿ ದರ್ಗಾ ನಿರ್ಮಿಸಲಾಗಿದೆ.ಮೊದಲು ಇರಲಿಲ್ಲ ಈಗ ಎಲ್ಲಿಂದ ಬಂದಿದೆ ಎಂದು ಪ್ರಶ್ನಿಸಿದ ಬೆನ್ನಲ್ಲೇ ದರ್ಗಾ ತೆರವು ನಡೆದಿದೆ.
ಮಾಹಿಮ್ ದರ್ಗಾ ಮತ್ತು ಹಾಜಿ ಅಲಿ ದರ್ಗಾ ಟ್ರಸ್ಟಿ ಸುಹೇಲ್ ಖಾಂಡ್ವಾನಿ ಹೇಳಿಕೆಯಲ್ಲಿ, ಇದು ದರ್ಗಾ ಅಲ್ಲ. ಅನಧಿಕೃತ ಕಟ್ಟಡಗಳ ಮೇಲೆ ಗುರುವಾರ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಖಾಂಡ್ವಾನಿ, “ಅಧಿಕಾರಿಗಳು ಟ್ರಸ್ಟ್ ಅನ್ನು ಸಂಪರ್ಕಿಸಿ ಅದನ್ನು ತೆಗೆದುಹಾಕಲು ಹೇಳಿದರೆ, ನಾವೇ ಅದನ್ನು ಮಾಡುತ್ತಿದ್ದೆವು. ನಾವು ಕಾನೂನು ಪಾಲಿಸುವ ನಾಗರಿಕರು ಮತ್ತು ಕಾನೂನನ್ನು ಪಾಲಿಸುತ್ತೇವೆ ಎಂದು ಅವರು ಹೇಳಿದರು.
ಚಿಲ್ಲಾ ಮೇಲೆ ಭಕ್ತರಿಂದ ಹೂವುಗಳು ಮತ್ತು ಚಾದರ್ಗಳನ್ನು ಅರ್ಪಿಸಲಾಯಿತು. ಅಲ್ಲಿ ಎಂದಿಗೂ ದರ್ಗಾ ಇರಲಿಲ್ಲ, ಜನರ ನಂಬಿಕೆ ಏನೆಂದರೆ ಮಖ್ದುಮ್ ಷಾ ಬಾಬಾ ಅಲ್ಲಿಗೆ ಭೇಟಿ ನೀಡುತ್ತಿದ್ದರು ಮತ್ತು ಆದ್ದರಿಂದ ಭಕ್ತರು ಸ್ಥಳದಲ್ಲಿ ಸೇರಿ ಪಾರ್ಥಿಸುತ್ತಿದ್ದರು ಎನ್ನಲಾಗಿದೆ.
ದ್ವೀಪದಂತಹ ಭೂಪ್ರದೇಶದಲ್ಲಿ ದರ್ಗಾ ತರದ ಆಕೃತಿ ಇತ್ತು.