ಮಂಗಳೂರು: ಖ್ಯಾತ ಹಾಸ್ಯನಟ ನಟ ಅರವಿಂದ್ ಬೋಳಾರ್ ಹೋಗುತ್ತಿದ್ದ ಆ್ಯಕ್ಟಿವಾ ಸ್ಕಿಡ್ ಆಗಿ ತೀವ್ರ ಗಾಯಗೊಂಡು ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಗರದ ಪಂಪ್ ವೆಲ್ ಬಳಿ ಹಾಸ್ಯನಟ ನಟ ಅರವಿಂದ್ ಬೋಳಾರ್ ಹೋಗುತ್ತಿದ್ದ ಆ್ಯಕ್ಟಿವಾ ಸ್ಕಿಡ್ ಆಗಿ ಅಪಘಾತವಾಗಿದೆ.ನಾಳೆ ಬೆಳಿಗ್ಗೆ ಅವರಿಗೆ ಕಾಲಿನ ಶಸ್ತ್ರ ಚಿಕಿತ್ಸೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಬಸ್ಸು ಢಿಕ್ಕಿಯಾಗುವುದನ್ನು ತಪ್ಪಿಸಲು ಅರವಿಂದ್ ಬೋಳಾರ್ ತಾನು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನದ ಬ್ರೇಕ್ ಹಾಕಿದ್ದಾರೆ.ಈ ವೇಳೆ ಬೈಕ್ ಸ್ಕಿಡ್ ಆಗಿದೆ ಎನ್ನಲಾಗಿದೆ.