ಕೊಡಗಿನಲ್ಲಿ ಯುವತಿಯನ್ನು ಬರ್ಬರವಾಗಿ ಕೊಲೆ

ಕೊಡಗು;ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವೀರಾಜಪೇಟೆ ಸಮೀಪದ ನಾಂಗಾಲ ಗ್ರಾಮದಲ್ಲಿ ರವಿವಾರ ರಾತ್ರಿ ನಡೆದಿದೆ.

ಕೊಲೆಯಾದ ಯುವತಿಯನ್ನು ನಾಂಗಲ ಗ್ರಾಮದ ಬುಟ್ಟಿಯಂಡಪ್ಪ ಮಾದಪ್ಪ, ಸುನಂದ ಅವರ ಪುತ್ರಿ ಆರತಿ (24) ಎಂದು ಗುರುತಿಸಲಾಗಿದೆ.

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ನಾಂಗಲ ಗ್ರಾಮದಲ್ಲಿ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.ಕೊಲೆ ಆರೋಪಿ ತಮ್ಮಯ್ಯ ಎನ್ನಲಾಗಿದ್ದು, ಈತನೂ ಆತ್ಮಹತ್ಯೆ ಮಾಡಿರುವ ಶಂಕೆ‌ ಇದೆ.

ಘಟನೆ ನಡೆದ ಸ್ಥಳಕ್ಕೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಟಾಪ್ ನ್ಯೂಸ್