ಕೇರಳ;ವಿವಾದಿತ ಕೇರಳ ಸ್ಟೋರಿ ಚಿತ್ರಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಮತಿ ನೀಡಬಾರದು ಎಂದು ಪ್ರಮುಖ ಇಸ್ಲಾಮಿಕ್ ವಿದ್ವಾಂಸ, ಇಂಡಿಯನ್ ಗ್ರಾಂಡ್ ಮುಪ್ತಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಆಗ್ರಹಿಸಿದ್ದಾರೆ.
ಕಣ್ಣೂರಿನಲ್ಲಿ ನಡೆದ ಎಸ್ ಎಸ್ ಎಫ್ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅಬೂಬಕರ್ ಮುಸ್ಲಿಯಾರ್, ಜನರ ನಡುವೆ ಒಡಕು ಮೂಡಿಸುವ ಯಾವುದೇ ಚಿತ್ರಕ್ಕೆ ಅವಕಾಶ ನೀಡಬೇಡಿ. ವೈರುಧ್ಯ ಮತ್ತು ದ್ವೇಷವನ್ನು ಹರಡುವ ಅಭಿವ್ಯಕ್ತಿಗಳನ್ನು ಪ್ರದರ್ಶಿಸುವುದು ಸಾಂಸ್ಕೃತಿಕ ಕೇರಳಕ್ಕೆ ಸೂಕ್ತವಲ್ಲದ ಕಾರಣ ವಿವಾದಾತ್ಮಕ ಚಿತ್ರವನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.
ನಮ್ಮ ದೇಶ ಸಹಿಷ್ಣುತ ಮತ್ತು ಸಾಹೋದರ್ಯದಿಂದ ಮಾನವಿಕ ವಿಚಾರಗಳಿಗೆ ಹೆಸರು ಕೇಳಿದ ನಾಡು. ಸಾಮೀಪ್ಯ ಕಾಲದಲ್ಲಿ ಧರ್ಮ ಸೌಹಾರ್ದವನ್ನು ಧ್ವಂಸಗೊಳಿಸುತ್ತಿರುವ ಮನುಷ್ಯರ ನಡುವೆ ಭಿನ್ನಾಭಿಪ್ರಾಯ ಮೂಡಿಸುವ ಅನೇಕ ಕಾರ್ಯಗಳು ಕಾಣಿಸಿಕೊಳ್ಳುತ್ತಿವೆ. ಅದರ ಹಿಂದೆ ಹಲವು ಆಸಕ್ತಿಗಳಿವೆ.ಅದೇ ರೀತಿಯ ಕಾರ್ಯಕ್ರಮದ ಭಾಗವಾಗಿ ಹೊಸ ಸಿನಿಮಾ ಬಿಡುಗಡೆಯಾಗುತ್ತಿದೆ ಎಂದು ಹೇಳಿದರು.
ಲವ್ ಜಿಹಾದ್ ಮಾಡಿ ಮತಾಂತರಗೊಳಿಸಿ ವಿದೇಶಕ್ಕೆ ಕರೆದೊಯ್ದು ಮಹಿಳೆಯರನ್ನು ಉಗ್ರಗಾಮಿ ಸಂಘಟನೆಗಳಲ್ಲಿ ಸೇರಿಸಲಾಗುತ್ತಿದೆ ಎಂದು ಕೇರಳ ಸ್ಟೋರಿ ಎಂಬ ಸಿನಿಮಾದಲ್ಲಿ ತೋರಿಸಲಾಗಿದೆ ಇದು ತಪ್ಪು ಪ್ರಚಾರವಾಗಿದೆ ಎಂದು ಕಾಂತಪುರಂ ಹೇಳಿದರು.
ನಮ್ಮ ದೇಶದ ನಿಜವಾದ ಇತಿಹಾಸವನ್ನು ಕಲಿಯಲು ವಿದ್ಯಾರ್ಥಿಗಳು ಸಿದ್ಧರಾಗಬೇಕು. ದೇಶದ ಪೂರ್ವ ಇತಿಹಾಸ ಕಲಿಸುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ದೇಶದ ಇತಿಹಾಸವನ್ನು ಸರಿಪಡಿಸುವುದು ಸಮಾನವಾಗಿದೆ. ನಮ್ಮ ಸಂವಿಧಾನ ಹೇಳುವುದು ಅಖಂಡಭಾರತ ಎಂಬ ಆಶಯವಾಗಿದೆ. ಭವಿಷ್ಯದ ನಾಗರಿಕ ಸಮುದಾಯದ ವಿದ್ಯಾರ್ಥಿಗಳು ಚೆನ್ನಾಗಿ ಕಲಿಯಬೇಕು. ಅದರೊಂದಿಗೆ ಸಮಾಜಕ್ಕೆ ಮಾದರಿಯಾಗಬೇಕು ಎಂದು ಅವರು ಹೇಳಿದರು.
ಕೇರಳ ಸ್ಟೋರಿ ಬಗ್ಗೆ ಸಿಎಂ ಪಿಣರಾಯ್ ವಿಜಯನ್ ನಿನ್ನೆ ಪ್ರತಿಕ್ರಿಯಿಸಿ, ಇದು ಸಂಘಪರಿವಾರದ ಸುಳ್ಳು ಕಾರ್ಖಾನೆಯ ಉತ್ಪನ್ನವಾಗಿದೆ ಎಂದು ಹೇಳಿದ್ದರು.
ಸಿಪಿಐಎಂ ರಾಜ್ಯ ಕಾರ್ಯದರ್ಶಿ ಎಂವಿ ಗೋವಿಂದನ್ ಕೂಡ ‘ಕೇರಳ ಸ್ಟೋರಿ’ಯನ್ನು ಟೀಕಿಸಿದ್ದಾರೆ.ಇದು ಆರ್‌ಎಸ್‌ಎಸ್ ಮತ್ತು ಬಿಜೆಪಿ ಕೋಮು ಪ್ರಚಾರಕ್ಕೆ ಬಳಸುತ್ತಿರುವ ಅಸ್ತ್ರವಾಗಿದೆ ಎಂದು ಅವರು ಹೇಳಿದರು. ಕೇರಳ ಸಮಾಜವನ್ನು ಅವಮಾನಿಸುವುದು ಮತ್ತು ಧಾರ್ಮಿಕ ಸೌಹಾರ್ದತೆಯನ್ನು ಹಾಳು ಮಾಡಲು ಪ್ರಯತ್ನಿಸುವುದು ಅತ್ಯಂತ ಗಂಭೀರವಾದ ವಿಷಯವಾಗಿದೆ. ಈ ರೀತಿ ಕೇರಳದಿಂದ ಸಾವಿರಾರು ಮಹಿಳೆಯರನ್ನು ಕಳ್ಳಸಾಗಣೆ ಮಾಡಲು ಸಾಧ್ಯವಿಲ್ಲ. ತಪ್ಪು ಪ್ರಚಾರದ ಕೆಲಸ ಮಾಡಲಾಗುತ್ತಿದೆ ಎಂದು ಎಂ.ವಿ.ಗೋವಿಂದನ್ ಟೀಕಿಸಿದರು.
ಸಿನಿಮಾದಲ್ಲಿ ಸುಮಾರು 32,000 ಹಿಂದೂ ಮಹಿಳೆಯರನ್ನು ಮತಾಂತರ ಮಾಡಿ ಉಗ್ರವಾದಿ ಸಂಘಟನೆಗೆ ಸೇರಿಸಲಾಗಿದೆ ಎಂದು ತೋರಿಸಲಾಗಿದೆ ಎನ್ನಲಾಗಿದೆ.