ಮದುವೆ ದಿನ ಅನಾರೋಗ್ಯ ಎಂದು ನಾಟಕ ಮಾಡಿದ ವರ; ಮುಂದೇನಾಯ್ತು?
ತೆಲಂಗಾಣ;ಮುದುವೆ ದಿನ ಆರೋಗ್ಯ ಸರಿ ಇಲ್ಲ ಎಂದು
ನಾಟಕ ಮಾಡಿದ ವರನಿಗೆ,ವಧುವಿನ ಕುಟುಂಬದವರು ಗೂಸಾ ಕೊಟ್ಟಿದ್ದಾರೆ.
ತೆಲಂಗಾಣದ ಜಗ್ತಿಯಾಲ್‌ನ ಫಂಕ್ಷನ್ ಹಾಲ್‌ನಲ್ಲಿ ವಧುವಿನ ಕುಟುಂಬದವರು ವರನ ಮೇಲೆ ಹಲ್ಲೆ ನಡೆಸಿದ್ದಾರೆ.
ಹನಮಕೊಂಡದ ಅನ್ವೇಶ್ ಯುಎಸ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿ.ಜಗ್ತಿಯಾಲ್‌ನ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಎರಡೂ ಕುಟುಂಬದ ಹಿರಿಯರು ಜಗ್ತಿಯಾಲ್ ಜಿಲ್ಲಾ ಕೇಂದ್ರದಲ್ಲಿ ಮದುವೆ ನಡೆಸಲು ನಿರ್ಧರಿಸಿದ್ದರು.
ಮಾತುಕತೆ ವೇಳೆ ವಧುವಿನ ಕುಟುಂಬ ಸದಸ್ಯರು ವರದಕ್ಷಿಣೆಯಾಗಿ 25 ಲಕ್ಷ ರೂಪಾಯಿಗಳನ್ನು ನೀಡಲು ಒಪ್ಪಿಕೊಂಡು,ನಿಶ್ಚಿತಾರ್ಥದ ಸಮಯದಲ್ಲಿ 15 ಲಕ್ಷ ರೂ. ಸೇರಿ ಒಟ್ಟು 25 ಲಕ್ಷ ರೂ.ನೀಡಿದ್ದರು.
ಆದರೆ ಮದುವೆ ದಿನ ವಾಶ್ ರೂಂನಲ್ಲಿ ಜಾರಿ ಬಿದ್ದಿದ್ದು, ತನ್ನನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ವರ ಕೇಳಿದ್ದಾನೆ. ಸಂಬಂಧಿಕರೆಲ್ಲ ಆತನನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದು, ವೈದ್ಯರು ಆತನಿಗೆ ಚಿಕಿತ್ಸೆಯನ್ನೂ ನೀಡಿದ್ದಾರೆ. ಆದರೆ ಅನ್ವೇಶ್ ಮತ್ತೊಮ್ಮೆ ಅನಾರೋಗ್ಯದಿಂದ ಬಳಲುತ್ತಿದ್ದೇನೆಂದು ಹೇಳಿದ್ದಾನೆ.ವೈದ್ಯರು ಎಲ್ಲಾ ಪರೀಕ್ಷೆಗಳನ್ನು ನಡೆಸಿ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂದು ಘೋಷಿಸಿದ್ದಾರೆ.
ಆದರೆ ಅನ್ವೇಶ್ ಹೈ ಡ್ರಾಮಾವನ್ನು ಮುಂದುವರಿಸಿದ್ದಾನೆ. ಇದರಿಂದ ವಧುವಿನ ಕುಟುಂಬ ಸದಸ್ಯರು ಅವನ ನಡವಳಿಕೆ ಮತ್ತು ನಾಟಕ ಕಂಡು ರೋಸಿ ಹೋಗಿ ಗೂಸಾ ಕೊಟ್ಟು ಮದುವೆ ಕ್ಯಾನ್ಸಲ್ ಮಾಡಿಸಿದ್ದಾರೆ.ಬಳಿಕ ಆತ ನನಗೆ ವಿವಾಹಕ್ಕೆ ಸಮ್ಮತ ಇರಲಿಲ್ಲ ಎಂದು ಒಪ್ಪೊಕೊಂಡಿದ್ದಾನೆ.