ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲು ಹಣ ನೀಡಲು ರಾಜ್ಯ ಸಂಪುಟ ನಿರ್ಧಾರ

ಬೆಂಗಳೂರು; ಅನ್ನಭಾಗ್ಯ ಯೋಜನೆಯಡಿಯಲ್ಲಿ ಜುಲೈ.1ರಿಂದ ಪಡಿತರ ಚೀಟಿದಾರರಿಗೆ 5 ಕೆಜಿ ಅಕ್ಕಿ ಬದಲು ಹಣ ನೀಡುವುದಾಗಿ ರಾಜ್ಯ ಸಂಪುಟ ನಿರ್ಧಾರಕ್ಕೆ ಬಂದಿದೆ.

ಈ ಕುರಿತಂತೆ ಆಹಾರ ಸಚಿವ ಮುನಿಯಪ್ಪ ಅವರು ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಐದು ಕೆಜಿ ಅಕ್ಕಿ ಬದಲಾಗಿದೆ ಹಣ ನೀಡಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಒಂದು ಕೆಜಿ ಅಕ್ಕಿಗೆ ರೂ.34 ನೀಡಲು ನಿರ್ಧರಿಸಲಾಗಿದೆ. ಜುಲೈ1ರಂದು ಫಲಾನುಭವಿಗಳಿಗೆ ಖಾತೆಗೆ ತಲಾ 170 ರೂಪಾಯಿಗಳನ್ನು ಜಮೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಅಕ್ಕಿ ದಾಸ್ತಾನು ಆಗೋವರೆಗೆ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಬಿಪಿಎಲ್ ಕಾರ್ಡ್ ದಾರರಿಗೆ ಅಕ್ಕಿ ಬದಲು ಹಣ ನೀಡಲಾಗುತ್ತದೆ. ಅಕ್ಕಿ ಸಿಕ್ಕ ನಂತ್ರ 10 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ ಎಂಬುದಾಗಿ ಘೋಷಣೆ ಮಾಡಿದರು.

ಅಕ್ಕಿ ಬದಲು ಜನಿರಿಗೆ ಹಣ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಐದು ಕೆಜಿ ಅಕ್ಕಿ ಬದಲು ಜನರಿಗೆ ಹಣ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ.

ಟಾಪ್ ನ್ಯೂಸ್