ಪ್ರೀತಿ ನಿರಾಕರಿಸಿದ ಅನ್ಯಕೋಮಿನ ಯುವತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಯುವಕ; ಯುವತಿ ಸಾವು, ಭಾರಿ ವಿವಾದ ಎಬ್ಬಿಸಿದ ಒ‌ನ್ ಸೈಡ್ ಲವ್ ಕೇಸ್
ರಾಂಚಿ;ಪ್ರೀತಿ ನಿರಾಕರಿಸಿದ ಯುವತಿಗೆ ಪೆಟ್ರೋಲ್ ಸುರಿದು ಯುವಕನೋರ್ವ ಬೆಂಕಿ ಹಚ್ಚಿದ್ದು,ಸಂತ್ರಸ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.ಪ್ರಕರಣ ಜಾರ್ಖಾಂಡ್ ರಾಜ್ಯದಲ್ಲಿ ವಿಭಿನ್ನ ಆಯಾಮವನ್ನು ಕೂಡ ಪಡೆದುಕೊಂಡಿದೆ
ನಾಲ್ಕು ದಿನಗಳ ಹಿಂದೆ ಶಾರುಖ್ ಹುಸೇನ್ ಎಂಬಾತ ಅಂಕಿತ ಎಂಬ ಬಾಲಕಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ನಂತರ ಜಾರ್ಖಂಡ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಂಕಿತಾ ಕುಮಾರಿ ಭಾನುವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಳು.ಸ್ವರಾಜ್ಯ ಪತ್ರಕರ್ತೆ ಸ್ವಾತಿ ಗೋಯಲ್ ಶರ್ಮಾ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 2.30ಕ್ಕೆ ಅಂಕಿತಾ ಕೊನೆಯುಸಿರೆಳೆದಿದ್ದಾಳೆ ಎಂದು ಬಾಲಕಿಯ ತಂದೆ ಸಂಜೀವ್ ಸಿಂಗ್ ಶರ್ಮಾ ಅವರಿಗೆ ತಿಳಿಸಿದ್ದಾರೆ.ಆಕೆಯನ್ನು ಚಿಕಿತ್ಸೆಗಾಗಿ ರಾಂಚಿ ರಿಮ್ಸ್ ಗೆ ದಾಖಲಿಸಲಾಗಿತ್ತು.

ಒನ್ ಸೈಡ್ ಪ್ರೀತಿಯಿಂದಾಗಿ ಶಾರುಖ್ ಹುಸೇನ್ ಅಂಕಿತಾ ಮೇಲೆ ಪೆಟ್ರೋಲ್ ಸುರಿದು ಜೀವಂತವಾಗಿ ಸುಟ್ಟು ಹಾಕಿದ್ದ.

ಅಂಕಿತಾ ಮೇಲೆ ಭೀಕರ ದಾಳಿ ಮಂಗಳವಾರ ಬೆಳಗ್ಗೆ ಜಾರ್ಖಂಡ್‌ನ ಧುಮ್ಕಾದಲ್ಲಿ ನಡೆದಿದೆ.ತನ್ನ ನೆರೆಮನೆಯವನಾದ ಶಾರುಖ್ ತನಗೆ ಪ್ರತಿದಿನ ಕಿರುಕುಳ ನೀಡುತ್ತಿದ್ದ ಎಂದು ಅಂಕಿತಾ ಗಂಭೀರ ಸ್ಥಿತಿಯಲ್ಲಿ ಪೊಲೀಸರಿಗೆ ತಿಳಿಸಿದ್ದಾರೆ.ಅವನು ಅವಳ ಬಳಿಗೆ ಹೋಗಿ ಅವಳನ್ನು ಪ್ರೀತಿಸುವಂತೆ ಕೇಳಿದ್ದ.ಆಕೆಯ ಫೋನ್ ನಂಬರ್ ಕೂಡ ಪಡೆದು ಪದೇ ಪದೇ ಕರೆ ಮಾಡಿ ಪ್ರೀತಿಸುವಂತೆ ಕೇಳುತ್ತಿದ್ದ.ಇದನ್ನು ನಿರಾಕರಿಸಿದಾಗ ಆತ ಅಂಕಿತಾಗೆ ಕೊಲೆ ಬೆದರಿಕೆ ಹಾಕಿದ್ದ.ಈ ವಿಚಾರವನ್ನು ಅಂಕಿತಾ ತನ್ನ ತಂದೆಗೆ ತಿಳಿಸಿದ್ದಳು.ಇದಕ್ಕೆ ಅಂಕಿತಾ ತಂದೆ ಮಾತನಾಡಿ ಪ್ರಕರಣ ತಿಳಿಗೊಳಿಸುವ ಎಂದಿದ್ದರೂ,ಆದರೆ ಹುಚ್ಚು ಪ್ರೇಮಿ ಶಾರುಕ್ ಅಂಕಿತಾಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾನೆ.

ಅಂಕಿತ ಆಸ್ಪತ್ರೆಯಲ್ಲಿ ಶಾರುಕ್ ಕಿರುಕುಳ ನೀಡುತ್ತಿದ್ದ ಬಗ್ಗೆ ಮ್ಯಾಜಿಸ್ಟ್ರೇಟ್ ಬಳಿ ಹೇಳಿದ್ದಾಳೆ.ಆ ಬಳಿಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ‌.ಟಾಪ್ ನ್ಯೂಸ್