ಬೈಕ್ ನಲ್ಲಿ ತೆರಳುತ್ತಿದ್ದ ಇಬ್ಬರು ರೌಡಿಶೀಟರ್ ಗಳ ಮೇಲೆ ಮಾರಕಾಸ್ತ್ರದಿಂದ ದಾಳಿ, ಓರ್ವ ಸಾವು, ಇನ್ನೋರ್ವ ಗಂಭೀರ
ದಾವಣಗೆರೆ:ರೌಡಿ ಶೀಟರ್ ಹಂದಿ ಅಣ್ಣಿ ಕೊಲೆ ಕೇಸ್ ಪ್ರಮುಖ ಆರೋಪಿಗಳ ಮೇಲೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಚೀಲೂರು ಸಮೀಪದ ಗೋವಿನ ಕೋವಿಯಲ್ಲಿ ಗ್ಯಾಂಗ್ವೊಂದು ದಾಳಿ ನಡೆಸಿದೆ.
ಗ್ಯಾಂಗ್ನಿಂದ ತೀವ್ರ ಹಲ್ಲೆಗೆ ಒಳಗಾದ ರೌಡಿಶೀಟರ್ ಆಂಜನೇಯ ಎಂಬಾತ ಸಾವನ್ನಪ್ಪಿದ್ದು, ರೌಡಿಶೀಟರ್ ಮಧು ಎಂಬವನ ಸ್ಥಿತಿ ಗಂಭೀರವಾಗಿದೆ.
ಕುಖ್ಯಾತ ರೌಡಿ ಹಂದಿ ಅಣ್ಣಿ ಅಲಿಯಾಸ್ ಅಣ್ಣಪ್ಪ ಬರ್ಬರ ಕೊಲೆ ಕೇಸ್ನಲ್ಲಿ ಆರೋಪಿಗಳಾದ ಮಧು, ಆಂಜನೇಯ ಎಂಬುವರು ಕೋರ್ಟ್ಗೆ ಹೋಗಿ ಬರುತ್ತಿದ್ದರು. ಕೋರ್ಟ್ ಮುಗಿಸಿ ಬೈಕ್ನಲ್ಲಿ ಬರುತ್ತಿದ್ದಾಗ ಸ್ಕಾರ್ಪಿಯೋ ಫಾಲೋ ಮಾಡಿಕೊಂಡು ಬಂದಿದೆ. ಸ್ಕಾರ್ಪಿಯೋದಲ್ಲಿ ಬಂದ ನಾಲ್ಕೈದು ಜನರ ಗ್ಯಾಂಗ್ ಇಬ್ಬರ ಮೇಲೆ ಹಲ್ಲೆ ನಡೆಸಿ ಎಸ್ಕೇಪ್ ಆಗಿದೆ.ಆಂಜನೇಯ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಧು ಸ್ಥಿತಿ ಗಂಭೀರವಾಗಿದೆ.