ಶಾಲಾ ಬ್ಯಾಗ್ ನಿಂದ ಪುಸ್ತಕ ತೆಗೆಯುವಾಗ ಬ್ಯಾಗ್ ನಲ್ಲಿದ್ದ ಚೇಳು ಕಚ್ಚಿ ಬಾಲಕ ಸಾವು

ಶಾಲಾ ಬ್ಯಾಗ್ ನಿಂದ ಪುಸ್ತಕ ತೆಗೆಯುವಾಗ ಬ್ಯಾಗ್ ನಲ್ಲಿದ್ದ ಚೇಳು ಕಚ್ಚಿ ಬಾಲಕ ಸಾವು

ಆಂಧ್ರಪ್ರದೇಶ: ಬ್ಯಾಗಿನಲ್ಲಿ ಪುಸ್ತಕಗಳ ಮಧ್ಯೆಯಿದ್ದ ಚೇಳು ಕಚ್ಚಿ ವಿದ್ಯಾರ್ಥಿಯೊಬ್ಬ ಸಾವನಪ್ಪಿರುವ ಘಟನೆ ಆಂದ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ.

9ನೇ ತರಗತಿಯ ರವಿಕಿರಣ ಮೃತ ವಿದ್ಯಾರ್ಥಿ.

ಬಾಲಕ ಪುಸ್ತಕಗಳಿದ್ದ ಬ್ಯಾಗಿನೊಳಕ್ಕೆ ಕೈಹಾಕಿದ್ದು ಈ ವೇಳೆ ಚೇಳೊಂದು ಕೈಗೆ ಕುಟುಕಿದೆ‌. ತಕ್ಷಣ ನೋವಿನಿಂದ ರವಿಕಿರಣ ಚೀರಾಡಿದ್ದಾನೆ.

ತಕ್ಷಣ ಶಿಕ್ಷಕರು ಬ್ಯಾಗ್ ಪರಿಶೀಲಿಸಿ ಬಾಲಕನಿಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ.ಆದರೆ ಬಾಲಕನ ಆರೋಗ್ಯದಲ್ಲಿ ತೀವ್ರ ಅಸ್ಥಸ್ಥತೆ ಕಂಡು ಬಂದು ಬಾಲಕ ಮೃತಪಟ್ಟಿದ್ದಾನೆ.

ಈ ಬಗ್ಗೆ ಮಾರ್ಕಾಪುರದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್