ಬೀದರ್; ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆ ಬೀದರ್ ಗೆ ಆಗಮಿಸಲಿದ್ದಾರೆ.ಈ ವೇಳೆ ಅವರಿಗೆ ದುಬಾರಿ ನೆನಪಿನ ಕಾಣಿಕೆ ನೀಡಲು ಶಾಸಕರೋರ್ವರು ಸಿದ್ಧತೆ ಮಾಡಿಕೊಂಡಿದ್ದಾರೆ.
ನಾಳೆ ನಡೆಯಲಿಯರುವ ಅದ್ದೂರಿ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆಯ ಬಹಿರಂಗ ಸಮಾವೇಶದಲ್ಲಿ ಅಮಿತ್ ಶಾ ಅವರಿಗೆ ಶಾಸಕ ಶರಣು ಸಲಗರ್ ಈ ವಿಶೇಷ ನೆನಪಿನ ಕಾಣಿಕೆಯೊಂದು ಸಿದ್ದತೆ ನಡೆಸಿದ್ದಾರೆ.
ಅಮಿತ್ ಶಾ ಅವರಿಗೆ 5 ಕೆಜಿಯ ಬೆಳ್ಳಿಯ ಗದೆ ಮತ್ತು ಬೆಳ್ಳಿಯ ಕಿರೀಟಾವನ್ನು ನೀಡಲು ಬಸವ ಕಲ್ಯಾಣ ಶಾಸಕ ಶರಣು ಸಲಗರ್ ಸಿದ್ಧ ಪಡಿಸಿದ್ದಾರೆ.