ಮೆದುಳು ತಿನ್ನುವ ಅಮೀಬಾದಿಂದ 2 ವರ್ಷದ ಮಗು ಸಾವು; ನೀರಿನಲ್ಲಿ ಆಡುವಾಗ ಮಗುವಿನ ದೇಹವನ್ನು ಪ್ರವೇಶಿಸಿದ್ದ ಮಾರಣಾಂತಿಕ ಸೋಂಕು

ಮೆದುಳು ತಿನ್ನುವ ಅಮೀಬಾದಿಂದ 2 ವರ್ಷದ ಮಗು ಸಾವು

ಅಮೆರಿಕಾ:ಮೆದುಳು ತಿನ್ನುವ ಅಮೀಬಾದಿಂದ 2 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಯುನೈಟೆಡ್ ಸ್ಟೇಟ್ಸ್‌ನ ನೆವಾಡಾದಲ್ಲಿ ನಡೆದಿದೆ.

ವುಡ್ರೋ ಟರ್ನರ್ ಬಂಡಿ ಮೃತ ಬಾಲಕ. ಯುನೈಟೆಡ್ ಸ್ಟೇಟ್ಸ್‌ನ ನೆವಾಡಾದಲ್ಲಿ ಎರಡು ವರ್ಷದ ಬಾಲಕ ಅಪರೂಪದ ಸೋಂಕಿನಿಂದ ಸಾವನ್ನಪ್ಪಿದ್ದಾನೆ.

ಬಾಲಕನ ಆರೋಗ್ಯದಲ್ಲಿ ಏರುಪೇರು ಹಿನ್ನೆಲೆ ಬಾಲಕನಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.ವೈದ್ಯರಿಗೆ ರೋಗದ ಲಕ್ಷಣದ ಬಗ್ಗೆ ತಿಳಿದಿದೆ.ಇದರಿಂದ ಮಗು ಬದುಕುಳಿಯುವುದು ಕಷ್ಟ ಎಂದು ಎರಡು ವರ್ಷದ ಮಗುವಿಗೆ ಚಿಕಿತ್ಸೆಯನ್ನು ನೀಡಲು ಹಿಂದೇಟು ಹಾಕಿದ್ದಾರೆ.

ನೀರಿನಲ್ಲಿ ಆಟವಾಡುತ್ತಿದ್ದಾಗ ಸೋಂಕು ದೇಹಕ್ಕೆ ನುಗ್ಗಿ ಮೂಗಿಗೆ ಪ್ರವೇಶಿಸಿದೆ ಎಂದು ಬಾಲಕನ ಕುಟುಂಬಸ್ಥರು ಹೇಳಿದ್ದಾರೆ. ಕಳೆದ ವಾರ ಜ್ವರ ತರಹದ ರೋಗಲಕ್ಷಣಗಳನ್ನು ಅನುಭವಿಸಲು ಪ್ರಾರಂಭಿಸಿದ ನಂತರ ಮಗು ಜುಲೈ 19 ರಂದು ನಿಧನವಾಗಿದೆ.

ಮಗುವನ್ನು ಕಳೆದುಕೊಂಡ ತಾಯಿ ಸೋಶಿಯಲ್​​​ ಮೀಡಿಯಾದಲ್ಲಿ ಈ ಕುರಿತಾಗಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಟಾಪ್ ನ್ಯೂಸ್