ಅಡ್ಡಗೋಡೆಯಿಲ್ಲದೆ ಲಕ್ಷಾಂತರ ವೆಚ್ಚದಲ್ಲಿ 4 ಸಾರ್ವಜನಿಕ ಶೌಚಾಲಯ ನಿರ್ಮಾಣ

ಅಡ್ಡಗೋಡೆಯಿಲ್ಲದೆ ಲಕ್ಷಾಂತರ ವೆಚ್ಚದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ

ಉತ್ತರಪ್ರದೇಶ; ಅಮೇಥಿ ಜಿಲ್ಲೆಯಲ್ಲಿ ಅಡ್ಡ ಗೋಡೆಯಿಲ್ಲದೆ ನಾಲ್ಕು ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದ್ದು, ಇದೀಗ ಸಾರ್ವಜನಿಕ ಶೌಚಾಲಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗಿದೆ.

ಜಗದೀಶ್‌ಪುರ ವಿಧಾನಸಭೆಯ ಕಟೆಹೆಟಿ ಗ್ರಾಮದ ಸಮುದಾಯ ಶೌಚಾಲಯದಲ್ಲಿ ಅಕ್ಕಪಕ್ಕದಲ್ಲಿ ನಾಲ್ಕು ಆಸನಗಳನ್ನು ಹಾಕಲಾಗಿದ್ದು, ಅವುಗಳ ನಡುವೆ ಗೋಡೆಗಳಿಲ್ಲ. ಈ ಶೌಚಾಲಯದ ವೀಡಿಯೋ ಮಾಡಿ ಕೆಲವರು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡಿದ್ದಾರೆ.

ವೈರಲ್‌ ವಿಡಿಯೋ ನೋಡಿ ಜನರು ವಿವಿಧ ರೀತಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

ಈ ವಿಡಿಯೋವನ್ನು ಯುಪಿ ಕಾಂಗ್ರೆಸ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಅಮೇಥಿ ಸಂಸದೆ, ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅವರನ್ನು ಟೀಕಿಸಿದೆ.

ಕಾಂಗ್ರೆಸ್ ತನ್ನ ಟ್ವೀಟ್‌ನಲ್ಲಿ, ಅಮೇಥಿಯಲ್ಲಿ ನಿರ್ಮಿಸಲಾದ ಈ ಸಾರ್ವಜನಿಕ ಶೌಚಾಲಯವನ್ನು ವಿಶ್ವದ ಎಂಟನೇ ಅದ್ಭುತ ಎಂದು ಘೋಷಿಸಿದರೆ ಹೇಗಿರುತ್ತದೆ? ನೋಡಿ, ಇಲ್ಲಿ ಐದು ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಅವುಗಳ ನಡುವೆ ಗೋಡೆ ಇಲ್ಲ. ಬದಲಿಗೆ ಒಂದು ಸಭಾಂಗಣದಲ್ಲಿ ಐದು ಹಾಸಿಗೆಗಳು ಮಲಗಿರುವಂತೆ ಅವುಗಳನ್ನು ಜೋಡಿಸಲಾಗಿದೆ. ವಿಷಯವೆಂದರೆ ಎಲ್ಲಾ ಗೋಡೆಗಳಿಗೆ ಹಣ ಬಂದಿರಬೇಕು, ಹಾಗಾದರೆ ಅವುಗಳನ್ನು ಯಾರು ತಿನ್ನುತ್ತಾರೆ? ಗುತ್ತಿಗೆದಾರರ? ಅಧಿಕಾರಿಗಳಾ? ಮಂತ್ರಿಗಳ ಅಥವಾ ಎಲ್ಲರೂ ಒಟ್ಟಾಗಿ ತಿಂದಿದ್ದಾರಾ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಟಾಪ್ ನ್ಯೂಸ್