ಇಸ್ರೇಲ್ ಗೆ ಅಮೆರಿಕಾ ಬೆಂಬಲಿಸಿದ್ದು ತಪ್ಪು ಎಂದು ರಾಜೀನಾಮೆ ನೀಡಿದ ಅಮೆರಿಕಾದ ಅಧಿಕಾರಿ

ಇಸ್ರೇಲ್‌ಗೆ ಮಿಲಿಟರಿ ಸಹಾಯವನ್ನು ಹೆಚ್ಚಿಸುವ ಅಮೆರಿಕಾದ ನಿರ್ಧಾರವನ್ನು ಖಂಡಿಸಿ US ರಾಜ್ಯ ಇಲಾಖೆಯ ಅಧಿಕಾರಿಯೊಬ್ಬರು ರಾಜೀನಾಮೆ ನೀಡಿರುವ ಬಗ್ಗೆ ವರದಿಯಾಗಿದೆ.

ಇಸ್ರೇಲ್‌ಗೆ ಯುಎಸ್‌ ಬೆಂಬಲಿಸುವುದರಿಂದ ಹೆಚ್ಚು ಸಾವು ನೋವುಗಳು ಸಂಭವಿಸುತ್ತದೆ ಎಂದು ಅವರು ಹೇಳಿದ್ದಾರೆ.

ಸ್ಟೇಟ್ ಡಿಪಾರ್ಟ್ಮೆಂಟ್ ಬ್ಯೂರೋ ಆಫ್ ಪೊಲಿಟಿಕಲ್-ಮಿಲಿಟರಿ ಅಫೇರ್ಸ್‌ನ ನಿರ್ದೇಶಕ ಜೋಶ್ ಪಾಲ್ ಅವರು ರಾಜ್ಯ ಇಲಾಖೆಗೆ ರಾಜೀನಾಮೆ ನೀಡಿದ್ದು, ಅಧ್ಯಕ್ಷ ಜೋ ಬಿಡೆನ್ ಅವರ ಆಡಳಿತವು ಅಮೆರಿಕಾ ದಶಕಗಳಿಂದ ಮಾಡುತ್ತಿದ್ದ ಅದೇ ತಪ್ಪುಗಳನ್ನು ಪುನರಾವರ್ತಿಸುತ್ತಿದೆ ಎಂದು ಹೇಳಿದ್ದಾರೆ.

ಅಮೆರಿಕಾದ ಬೆಂಬಲದೊಂದಿಗೆ ಇಸ್ರೇಲ್ ನೀಡುವ ಪ್ರತಿಕ್ರಿಯೆ ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ ಜನರ ಹೆಚ್ಚು ಮತ್ತು ಆಳವಾದ ದುಃಖಕ್ಕೆ ಕಾರಣವಾಗುತ್ತದೆ. ಈ ಹಿಂದೆ ನಾವು ಮಾಡಿದ ಅದೇ ತಪ್ಪುಗಳನ್ನು ನಾವು ಪುನರಾವರ್ತಿಸುತ್ತಿದ್ದೇವೆ ಎಂದು ನಾನು ಭಯಪಡುತ್ತೇನೆ ಮತ್ತು ದೀರ್ಘಕಾಲದವರೆಗೆ ಅದರ ಭಾಗವಾಗಿರಲು ನಾನು ನಿರಾಕರಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಬಿಡೆನ್ ಆಡಳಿತವು ಕಣ್ಣು ಮುಚ್ಚಿಕೊಂಡು ಒನ್ ಸೈಡ್ ಮಾತ್ರ ಬೆಂಬಲ ನೀಡುತ್ತಿದೆ. ಇದು ವಿನಾಶಕಾರಿ, ಅನ್ಯಾಯ ಮತ್ತು ನಾವು ಸಾರ್ವಜನಿಕವಾಗಿ ಪ್ರತಿಪಾದಿಸುವ ಮೌಲ್ಯಗಳಿಗೆ ವಿರುದ್ಧವಾದವು ಎಂದು ಹೇಳಿದ್ದಾರೆ.

11 ವರ್ಷಗಳಿಗೂ ಹೆಚ್ಚು ಕಾಲ US ಮಿತ್ರರಾಷ್ಟ್ರಗಳಿಗೆ ಶಸ್ತ್ರಾಸ್ತ್ರ ವರ್ಗಾವಣೆಯಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದ ಪಾಲ್ ಇದೇ ವೇಳೆ ಹೇಳಿದ್ದಾರೆ.

ಟಾಪ್ ನ್ಯೂಸ್