ಅಮೆರಿಕ ವಶದಲ್ಲಿ ಇದೆಯಾ ಅನ್ಯಗ್ರಹ ಜೀವಿಗಳು? ಮಾಜಿ ಗುಪ್ತಚರ ಅಧಿಕಾರಿ ಹೇಳಿದ್ದೇನು ಗೊತ್ತಾ?

ನವದೆಹಲಿ;ಅಮೆರಿಕ ಸರ್ಕಾರದ ವಶದಲ್ಲಿ ಯುಎಫ್‌ಒಗಳು ಮತ್ತು ಮಾನವಯೇತರ ಜೀವಿಗಳ ದೇಹಗಳು ಇವೆ ಎಂದು ಅಮೆರಿಕದ ಮಾಜಿ ಗುಪ್ತಚರ ಅಧಿಕಾರಿ ಡೇವಿಡ್ ಗ್ರುಸ್ಚ್ ಹೇಳಿದ್ದಾರೆ.

ವಾಷಿಂಗ್ಟನ್‌ನಲ್ಲಿ ಸದನ ಮೇಲ್ವಿಚಾರಣಾ ಸಮಿತಿಯೊಂದರ ಮುಂದೆ ಗ್ರುಸ್ಚ್ ಅವರು ಈ ಹೇಳಿಕೆ ನೀಡಿದ್ದಾರೆ.

ಅನ್ಯಗ್ರಹ ಜೀವಿಗಳ ನೌಕೆಯನ್ನು ಅಮೆರಿಕ ಸರ್ಕಾರ ತನ್ನ ಬಳಿ ಇರಿಸಿಕೊಂಡಿದೆ ಎಂದು ಗ್ರುಸ್ಚ್ ಅವರು ಜೂನ್‌ನಲ್ಲಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರಿಂದ ವಿವರಣೆ ಪಡೆದುಕೊಳ್ಳಲಾಗಿದೆ.

ಸರ್ಕಾರ ವಶಪಡಿಸಿಕೊಂಡ ಕೆಲವು ವಸ್ತುಗಳ ಜತೆಗೆ ಜೀವಿಗಳೂ ಇದ್ದವು. ಈ ಜೀವಿಗಳು ಮನುಷ್ಯೇತರ ದೇಹಗಳಾಗಿವೆ. ಈ ವಿಚಾರದ ಬಗ್ಗೆ ‘ನೇರ ತಿಳಿವಳಿಕೆ’ ಇರುವ ವ್ಯಕ್ತಿಗಳು ಇದನ್ನು ಖಚಿತಪಡಿಸಿದ್ದಾರೆ ಎಂದು ಗ್ರುಸ್ಚ್ ಪ್ರತಿಕ್ರಿಯೆ ನೀಡಿದ್ದಾರೆ.

ಡೇವಿಡ್ ಗ್ರುಸ್ಚ್ ಅವರು 2023ರವರೆಗೂ ಅಮೆರಿಕದ ರಕ್ಷಣಾ ಇಲಾಖೆಯ ಸಂಸ್ಥೆಯಲ್ಲಿ ವಿವರಿಸಲಾಗದ ಅಸಂಗತ ವಿದ್ಯಮಾನಗಳ (ಯುಎಪಿ) ವಿಶ್ಲೇಷಣೆಯ ನೇತೃತ್ವ ವಹಿಸಿದ್ದರು. ಅನ್ಯಗ್ರಹ ಜೀವಿಗಳ ಬಗ್ಗೆ ಪುರಾವೆಗಳನ್ನು ಸರ್ಕಾರವು ಮುಚ್ಚಿಡುತ್ತಿದೆ ಎಂದು ಇದೇ ವೇಳೆ ಅವರು ಹೇಳಿದ್ದಾರೆ.

ಟಾಪ್ ನ್ಯೂಸ್