ಮರ ಕಡಿದ ಶಂಕೆಯಲ್ಲಿ ಮೂವರು ಮುಸ್ಲಿಂ ಯುವಕರಿಗೆ ಥಳಿತ, ಓರ್ವ ಸಾವು

ಮರ ಕಡಿದ ಶಂಕೆಯಲ್ಲಿ ಮೂವರು ಮುಸ್ಲಿಂ ಯುವಕರಿಗೆ ಥಳಿತ,ಓರ್ವ ಸಾವು

ರಾಜಸ್ಥಾನ;ಮರ ಕಡಿದ ಶಂಕೆಯಲ್ಲಿ ಮೂವರು ಮುಸ್ಲಿಂ ಯುವಕರಿಗೆ ಥಳಿಸಿದ್ದು, ಅದರಲ್ಲಿ ಓರ್ವ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ವಾಸಿಂ(27) ಹಲ್ಲೆಗೊಳಗಾಗಿ ಮೃತಪಟ್ಟ ಯುವಕ.ಘಟನೆಯಲ್ಲಿ ಆಸಿಫ್ ಮತ್ತು ಅಜರುದ್ದೀನ್ ಗಂಭೀರವಾಗಿ ಗಾಯಗೊಂಡಿದ್ದಾರೆ‌.

ಅಲ್ವಾರ್‌ನ ಬನ್ಸೂರ್ ತಹಸಿಲ್‌ನ ರಾಂಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮರ ಕಡಿಯಲು ಹೋಗುತ್ತಿದ್ದಾರೆ ಎಂದು ಆರೋಪಿಸಿ ಮೂವರು ಯುವಕರ ಮೇಲೆ ಗುಂಪು ಹಲ್ಲೆ ನಡೆಸಿದೆ.

ವರದಿಗಳ ಪ್ರಕಾರ, ಮೂವರು ಮುಸ್ಲಿಂ ಯುವಕರು ತಮ್ಮ ಪಿಕಪ್ ಜೀಪಿನಲ್ಲಿ ಹೋಗುತ್ತಿದ್ದಾಗ ಕಾಡಿನಲ್ಲಿ ಸುಮಾರು ಹನ್ನೆರಡು ಜನರ ಗುಂಪು ಅವರನ್ನು ತಡೆದು ಹಲ್ಲೆ ನಡೆಸಿದೆ.

ಯುವಕರ ಮೇಲೆ ದಾಳಿ ನಡೆಸಿದ ಗುಂಪಿನೊಂದಿಗೆ ನಾಲ್ವರು ಅರಣ್ಯಾಧಿಕಾರಿಗಳು ಇದ್ದರು.ಬಳಿಕ ಗಾಯಗೊಂಡ ಯುವಕರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.ಅಲ್ಲಿ ಓರ್ವ ಯುವಕ ಸಾವನ್ನಪ್ಪಿದ್ದಾನೆ.ಗಾಯಗೊಂಡ ಯುವಕರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತ ವಾಸೀಂ ತಂದೆ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.ತನ್ನ ಮಗ ವಾಸಿಂ (27) ಇಬ್ಬರು ಸ್ನೇಹಿತರಾದ ಆಸಿಫ್ ಮತ್ತು ಅಜರುದ್ದೀನ್ ಜೊತೆ ಜೀಪಿನಲ್ಲಿ ತೆರಳುವಾಗ, ನರೋಲ್ ಗ್ರಾಮದ ಬಳಿ ಗುಂಪು ಅವರ ಜೀಪನ್ನು ನಿಲ್ಲಿಸಿ ಹಲ್ಲೆ ನಡೆಸಲಾಗಿದೆ.ಇದರಿಂದ ಮಗ ಮೃತಪಟ್ಟಿದ್ದಾನೆಂದು ಆರೋಪಿಸಲಾಗಿದೆ.

ಈ ಕುರಿತು ಹರಸೋರಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸುಮಾರು 10 ಜನರನ್ನು ಬಂಧಿಸಿದ್ದಾರೆ.ಬಂಧಿತರಲ್ಲಿ ನಾಲ್ವರು ಅರಣ್ಯಾಧಿಕಾರಿಗಳು ಕೂಡ ಇದ್ದಾರೆ ಎಂದು ತಿಳಿದು ಬಂದಿದೆ.

ಟಾಪ್ ನ್ಯೂಸ್