ಗಾಝಾದ ಅಲ್ ಶಿಫಾ ಆಸ್ಪತ್ರೆಯ ಆವರಣದಲ್ಲೇ ನೂರಾರು ಮಂದಿಯ ಸಾಮೂಹಿಕ ಸಮಾಧಿ

ಗಾಝಾದ ಅತಿದೊಡ್ಡ ಅಲ್ ಶಿಫಾ ಆಸ್ಪತ್ರೆಯಲ್ಲಿ ಶಿಶುಗಳು ಸೇರಿದಂತೆ 179 ಜನರನ್ನು ಆಸ್ಪತ್ರೆಯ ಆವರಣದೊಳಗೆ ಸಾಮೂಹಿಕ ಸಮಾಧಿ ಮಾಡಲಾಗಿದೆ ಎಂದು ಅಲ್ ಶಿಫಾ ಆಸ್ಪತ್ರೆಯ ಮುಖ್ಯಸ್ಥ ಮೊಹಮ್ಮದ್ ಅಬು ಸಲ್ಮಿಯಾ ಹೇಳಿದ್ದಾರೆ.

ಅಲ್ ಶಿಫಾ ಆಸ್ಪತ್ರೆಯಲ್ಲಿನ ಮಾನವೀಯ ಬಿಕ್ಕಟ್ಟನ್ನು ಅಬು ಸಲ್ಮಿಯಾ ಒತ್ತಿಹೇಳಿದ್ದು, ನಾವು ಅವರನ್ನು ಸಾಮೂಹಿಕವಾಗಿ ಸಮಾಧಿ ಮಾಡಿದ್ದೇವೆಂದು ಹೇಳಿದ್ದಾರೆ. ಆಸ್ಪತ್ರೆಯಲ್ಲಿ ಇಂಧನ ಕೊರತೆ ನಂತರ ತೀವ್ರ ನಿಗಾ ಘಟಕದಲ್ಲಿ 7 ಶಿಶುಗಳು ಮತ್ತು 29 ಇತರರು ಮೃತಪಟ್ಟಿದ್ದು ಅವರನ್ನು ಕೂಡ ಆಸ್ಪತ್ರೆ ಕಾಂಪ್ಲೆಕ್ಸ್‌ನಲ್ಲಿ ಸಮಾಧಿ ಮಾಡಲಾಗಿದೆ.

ಪತ್ರಕರ್ತರೊಬ್ಬರು, ಕೊಳೆತ ದೇಹಗಳ ದುರ್ನಾತ ಎಲ್ಲೆಡೆ ಹರಡಿದೆ ಎಂದು ಹೇಳಿದ್ದಾರೆ. ಆಸ್ಪತ್ರೆಯ ವೈದ್ಯರೋರ್ವರು ಅಪರಿಸ್ಥಿತಿಯನ್ನು ಅಮಾನವೀಯ ಎಂದು ಕರೆದಿದ್ದು, ವಿದ್ಯುತ್, ನೀರು, ಆಹಾರ ಸಿಗುತ್ತಿಲ್ಲ ಎಂದು ಹೇಳಿದ್ದಾರೆ.

ಅಲ್ ಶಿಫಾ ಆಸ್ಪತ್ರೆಯು ಗಾಝಾ ನಗರದ ಅತಿದೊಡ್ಡ ಆಸ್ಪತ್ರೆಯಾಗಿದೆ. ಇಸ್ರೇಲ್‌ ಪಡೆ ಇದೀಗ ಆಸ್ಪತ್ರೆಯ ಗೇಟ್‌ನ್ನು ಸುತ್ತುವರಿದಿದೆ. ಆಸ್ಪತ್ರೆಯ ಆವರಣದ ಬಳಿ ಇಸ್ರೇಲ್‌ ದಾಳಿ ಬಳಿಕ ಆಸ್ಪತ್ರೆಗೆ ವಿದ್ಯುತ್‌ ಕೊರತೆ ಉಂಟಾಗಿದೆ. ಆಮ್ಲಜನಕದ ಕೊರತೆಯಿಂದ ನವಜಾತ ಶಿಶುಗಳ ಸಾವು ಸಂಭವಿಸಿದೆ. ಐಸಿಯು ಘಟಕಗಳ ಸ್ಥಗಿತದಿಂದ ಅಪಾರ ಸಾವುಗಳು ಸಂಭವಿಸಿದೆ.

ರೋಗಿಗಳು, ಸಿಬ್ಬಂದಿ ಮತ್ತು ಸ್ಥಳಾಂತರಗೊಂಡ ನಾಗರಿಕರು ಸೇರಿದಂತೆ 10,000 ಕ್ಕೂ ಹೆಚ್ಚು ಜನರು ಅಲ್ ಶಿಫಾದೊಳಗೆ ಇರಬಹುದು ಎನ್ನಲಾಗಿದೆ. ಆದರೆ ಆಸ್ಪತ್ರೆ ಸುತ್ತ ಇಸ್ರೇಲ್‌ ಪಡೆಗಳು ಆವರಿಸಿದ ಕಾರಣ ತೆರವಿಗೆ ಸಮಸ್ಯೆಯಾಗಿದೆ.

ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಅಂತರಾಷ್ಟ್ರೀಯ ಮಾನವೀಯ ಕಾನೂನಿನ ಅಡಿಯಲ್ಲಿ ರಕ್ಷಿಸಬೇಕಿದೆ ಮತ್ತು ಅವರ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಬೇಕು. ರೋಗಿಗಳು, ಸಿಬ್ಬಂದಿ ಮತ್ತು ಇತರ ನಾಗರಿಕರನ್ನು ರಕ್ಷಿಸಬೇಕು ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಕಚೇರಿ ತಿಳಿಸಿದೆ.

ಈ ಮಧ್ಯೆ ಶಿಶುಗಳನ್ನು ಸ್ಥಳಾಂತರಿಸಲು ಸಹಾಯ ಮಾಡುವುದಾಗಿ ಇಸ್ರೇಲ್ ವಾಗ್ದಾನ ಮಾಡಿತ್ತು. ಅದು ಇಲ್ಲಿಯವರೆಗೆ ನಡೆದಿಲ್ಲ.

ಇಂದು ಮುಂಜಾನೆ ಅಲ್ ಶಿಫಾ ಆಸ್ಪತ್ರೆಯಿಂದ ಹೃದಯ ವಿದ್ರಾಹಕ ಚಿತ್ರಗಳು ವೈರಲ್‌ ಆಗಿದೆ. 7 ಶಿಶುಗಳನ್ನು ಒಟ್ಟಿಗೆ ಹಸಿರು ಬಟ್ಟೆ ಹೊದಿಸಿ ಇರಿಸಲಾಗಿತ್ತು. ಶಿಶುಗಳನ್ನು ಐಸಿಯುನ ಬದಲು ವಿದ್ಯುತ್‌ ಇಲ್ಲದ ಕಾರಣ ಸಾಮಾನ್ಯ ಹಾಸಿಗೆಗಳಲ್ಲಿ ಇರಿಸಿದ ಕಾರಣ ಮೃತಪಟ್ಟಿತ್ತು.

ಟಾಪ್ ನ್ಯೂಸ್

ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಕೂಡಿ ಹಾಕಿ ಚಿತ್ರಹಿಂಸೆ; ವಿಧ್ಯಾಭ್ಯಾಸಕ್ಕೆಂದು ಕರೆದುಕೊಂಡು ಹೋಗಿ ಮನೆಗೆಲಸ ಮಾಡುವಂತೆ ಬಲವಂತ!

7 ತಿಂಗಳುಗಳಿಂದ ಬಾತ್ರೂಮ್​ನಲ್ಲಿ ಬಂಧಿಯಾಗಿದ್ದ 20 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಅಮೆರಿಕಾದ ಅಧಿಕಾರಿಗಳು