ಅಲಿಗಢ: ಅಲಿಗಢಲ್ಲಿರುವ ಮಸೀದಿಯೊಂದಕ್ಕೆ ಹೋಳಿ ಹಬ್ಬದ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಟಾರ್ಪಾಲಿನ್ ಹೊದಿಕೆ ಹಾಕಿರುವ ಬಗ್ಗೆ ವರದಿಯಾಗಿದೆ.
ಪೊಲೀಸ್ ಇಲಾಖೆಯ ಸೂಚನೆಯ ಮೇರೆಗೆ, ಹೋಳಿ ಹಬ್ಬದ ಹಿನ್ನೆಲೆ, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ, ಅಲಿಗಢದ ಅತ್ಯಂತ ಸೂಕ್ಷ್ಮ ಹಲ್ವಾಯಿಯಾ ಕ್ರಾಸ್‌ರೋಡ್‌ನಲ್ಲಿರುವ ಅಬ್ದುಲ್ ಕರೀಮ್ ಮಸೀದಿಯನ್ನು ಟಾರ್ಪಾಲಿನ್‌ನಿಂದ ಮುಚ್ಚಲಾಗಿದೆ.
ಕಳೆದ 7 ವರ್ಷಗಳಿಂದ ಹೋಳಿ ಹಬ್ಬದಲ್ಲಿ ರಾತ್ರಿಯ ಸಮಯದಲ್ಲಿ ಈ ಮಸೀದಿಯನ್ನು ಇದೇ ರೀತಿ ಟಾರ್ಪಾಲಿನ್‌ನಿಂದ ಮುಚ್ಚಲಾಗುತ್ತಿದೆ.
ಮಸೀದಿಯ ಆಡಳಿತ ಮಂಡಳಿಯ ಹಾಜಿ ಮೊಹಮ್ಮದ್ ಇಕ್ಬಾಲ್ ಮಾತನಾಡಿ, ಸ್ಥಳೀಯ ಆಡಳಿತದ ಸೂಚನೆ ಮೇರೆಗೆ ಮಸೀದಿಗೆ ಯಾರೂ ಬಣ್ಣ ಅಥವಾ ಮಣ್ಣು ಎಸೆಯದಂತೆ ಟಾರ್ಪಾಲಿನ್‌ನಿಂದ ಮುಚ್ಚಿದ್ದೇವೆ ಎಂದು ಹೇಳಿದ್ದಾರೆ.
ಮಸೀದಿಗೆ ಯಾರೂ ಬಣ್ಣ ಅಥವಾ ಕೊಳಕು ಎರಚದಂತೆ ರಕ್ಷಿಸಲು ನಾವು ಮಸೀದಿಯನ್ನು ಮುಚ್ಚುತ್ತೇವೆ ಎಂದು ನಿವಾಸಿ ಅಖೀಲ್ ಪಹಲ್ವಾನ್ ಹೇಳಿದರು.