ಉತ್ತರಪ್ರದೇಶದ ಕೆಲವೆಡೆ ಕಾಣಿಸಿಕೊಂಡ ಬಿರುಕು; ಜೋಶಿಮಠದ ಬೆನ್ನಲ್ಲೇ ಮತ್ತೊಂದೆಡೆ ಭೀತಿಯಲ್ಲಿ‌ ಜನ

ಉತ್ತರಪ್ರದೇಶ;ಉತ್ತರಾಖಂಡ್ ನ ಜೋಶಿಮಠ ಪ್ರದೇಶದಲ್ಲಿ ಭೂಮಿ ಕುಸಿಯುವ ಭೀತಿ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿಯೂ ಇಂತಹದ್ದೇ ಬೆಳವಣಿಗೆ ಕಂಡು ಬಂದಿದೆ.

ಅಲಿಘಡ್ ನ ಕನ್ವರಿಗಂಜ್ ಪ್ರದೇಶದಲ್ಲಿ ಕೆಲವು ಮನೆಗಳಲ್ಲಿ ಹಠಾತ್ ಬಿರುಕುಗಳು ಉಂಟಾಗಿದ್ದು ಸ್ಥಳೀಯರಲ್ಲಿ ಭೀತಿ ಮೂಡಿಸಿದೆ.

ಕಳೆದ ಹಲವು ದಿನಗಳಿಂದ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು,ಇದರಿಂದ ಭಯಭೀತರಾಗಿದ್ದೇವೆ. ಹೀಗಾಗಿ ನಾವು ನಗರಸಭೆ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದ್ದೇವೆ.ಆದರೆ ನಗರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ರಾಕೇಶ್ ಕುಮಾರ್ ಯಾದವ್ ಪ್ರತಿಕ್ರಿಯಿಸಿ ಸಮಸ್ಯೆಯನ್ನು ಅವಲೋಕಿಸಿ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್