ಕಾಲೇಜು ಕ್ಯಾಂಪಸ್ ನಲ್ಲಿ ನಮಾಝ್ ಮಾಡಿದ್ದಕ್ಕೆ ಪ್ರಾಧ್ಯಾಪಕರಿಗೆ ಶಿಕ್ಷೆ!
ಅಲಿಘರ್: ಕಾಲೇಜ್ ಕ್ಯಾಂಪಸ್ ನಲ್ಲಿ ಖಾಸಗಿ ಕಾಲೇಜಿನ ಪ್ರಾಧ್ಯಾಪಕರೋರ್ವರ ನಮಾಝ್ ವಿಡಿಯೋ ವೈರಲ್ ಬೆನ್ನಲ್ಲೆ ಪ್ರಾಧ್ಯಾಪಕರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿರುವ ಅಚ್ಚರಿ ಘಟನೆ ವರದಿಯಾಗಿದೆ.
ವೈರಲ್ ವೀಡಿಯೋದಲ್ಲಿ, ಅಲಿಘರ್ ನ ಶ್ರೀವರ್ಷಿ ಕಾಲೇಜ್ ನ ಕ್ಯಾಂಪಸ್ ನೊಳಗಿನ ಉದ್ಯಾನವನದಲ್ಲಿ ಅಲ್ಲಿನ ಪ್ರಾಧ್ಯಾಪಕರಾದ ಪ್ರೊಫೆಸರ್ ಎಸ್.ಕೆ ಖಾಲಿದ್ ಅವರು ನಮಾಝ್ ಮಾಡುತ್ತಿರುವ ದೃಶ್ಯ ಸೆರೆಯಾಗಿತ್ತು. ಈ ವೀಡಿಯೋವನ್ನು ಕೆಲವರು ಸೆರೆ ಹಿಡಿದು ಕಾಲೇಜಿನ ಅಧಿಕಾರಿಗಳಿಗೆ ಕಳುಹಿಸಿ ಕ್ರಮಕ್ಕೆ ಆಗ್ರಹಿಸಿದ್ದರು.
ವೀಡಿಯೊ ವೈರಲ್ ಆಗುತ್ತಿದ್ದಂತೆ ಬಿಜೆಪಿ ಪ್ರಾಧ್ಯಾಪಕರು ಮತ್ತು ಕಾಲೇಜಿನ ವಿರುದ್ಧ ಪ್ರತಿಭಟನೆ ನಡೆಸಿತ್ತು.