BREAKING ಮೆಲ್ಕಾರ್; ವಿದ್ಯುತ್ ಶಾಕ್ ಹೊಡೆದು ಯುವಕ ಮೃತ್ಯು

-ಶಾಫೀ(29) ಮೃತ ಯುವಕ

ಬಂಟ್ವಾಳ;ತೋಟದಲ್ಲಿ ಅಡಿಕೆ ತೆಗೆಯುವಾಗ ವಿದ್ಯುತ್ ಶಾಕ್ ಹೊಡೆದು ಯುವಕನೋರ್ವ ಮೃತಪಟ್ಟ ಘಟನೆ ಮೆಲ್ಕಾರ್ ಆಲಂಪಾಡಿ ಬಳಿ ನಡೆದಿದೆ.

ಬೋಳಿಯಾರ್ ನಿವಾಸಿ ಇಬ್ರಾಹೀಂ ಅವರ ಮಗ ಶಾಫೀ(29) ಮೃತ ಯುವಕ ಎಂದು ತಿಳಿದು ಬಂದಿದೆ.

ಇಂದು ಬೆಳಿಗ್ಗೆ ಆಲಂಪಾಡಿ ಬಳಿ ತೋಟದ ಕೆಲಸಕ್ಕೆ ತೆರಳಿದ ಶಾಫೀ ಅಡಿಕೆ ತೆಗೆಯಲೆಂದು ಉದ್ದನೆಯ ಸಲಾಖೆಯನ್ನು ಕತ್ತಿ ಕಟ್ಟಿ ಮೇಲಕ್ಕೆತ್ತಿದಾಗ ಕರೆಂಟ್ ಶಾಕ್ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತದೇಹವನ್ನು‌ ಬಂಟ್ವಾಳದ ಶವಾಗಾರದಲ್ಲಿ ಇರಿಸಲಾಗಿದೆ.ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹದ ಹಸ್ತಾಂತರ ಕಾರ್ಯ ನಡೆಯಲಿದೆ ಎನ್ನಲಾಗಿದೆ.ಈ ಕುರಿತು ಹೆಚ್ಚಿನ‌ ಮಾಹಿತಿ ನಿರೀಕ್ಷಿಸಲಾಗಿದೆ.

ಕರ್ನಾಟಕದಲ್ಲಿ ಮುಂದಿನ 3-4 ದಿನ ಮಳೆ ಸಾಧ್ಯತೆ

ಅರಬ್ಬಿ ಸಮುದ್ರದಲ್ಲಿ ಬಿಪೊರ್​ಜೊಯ್​​ ಚಂಡಮಾರುತದ ಆರ್ಭಟ ತೀವ್ರ ಸ್ವರೂಪ ಪಡೆದ ಹಿನ್ನೆಲೆ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದೇಶದ ರಾಜಧಾನಿ ದೆಹಲಿ, ಕರ್ನಾಟಕ ಸೇರಿದಂತೆ ಹಲವೆಡೆ ಇಂದು ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಇಂದು ಮಳೆಯಾದರೂ ಬಿಸಿಯೂ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಭಾರತೀಯ ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ದೆಹಲಿ, ಕರ್ನಾಟಕ ಸೇರಿದಂತೆ ಐದು ರಾಜ್ಯಗಳಲ್ಲಿ ಇಂದು ಮಳೆಯಾಗಲಿದೆ. ಅದರೊಂದಿಗೆ ಶಾಖವೂ ಹೆಚ್ಚಾಗುತ್ತದೆ ಮತ್ತು ಮುಂಬರುವ ದಿನಗಳಲ್ಲಿ ತಾಪಮಾನ ಇತ್ತಷ್ಟು ಹೆಚ್ಚಾಗುತ್ತದೆ ಎಂದು ಐಎಂಡಿ ಹೇಳಿದೆ. ಬಿಸಿಗಾಳಿ ಮುಂದುವರಿಯುವ ಸಾಧ್ಯತೆಗಳು ಸದ್ಯಕ್ಕೆ ಕಡಿಮೆ ಇದೆ. ಇಂದು ದೆಹಲಿಯಲ್ಲಿ ಗರಿಷ್ಠ ತಾಪಮಾನ 41 ಡಿಗ್ರಿ ಇರುತ್ತದೆ.

ಟಾಪ್ ನ್ಯೂಸ್