ಆಟವಾಡುವ ವೇಳೆ ಹಾವನ್ನು ಕಚ್ಚಿ ತಿಂದ ಮೂರು ವರ್ಷದ ಮಗು; ಶಾಕಿಂಗ್ ಘಟನೆ ವರದಿ

ಆಟವಾಡುವ ವೇಳೆ ಹಾವನ್ನು ಕಚ್ಚಿ ತಿಂದ ಮೂರು ವರ್ಷದ ಮಗು; ಶಾಕಿಂಗ್ ಘಟನೆ ವರದಿ

ಉತ್ತರಪ್ರದೇಶ;ಫಾರುಖಾಬಾದ್‌ನಲ್ಲಿ ಆಟವಾಡುವ ವೇಳೆ ಮೂರು ವರ್ಷದ ಮಗು ಹಾವನ್ನು ಹಿಡಿದು ಬಾಯಿಗೆ ಹಾಕಿಕೊಂಡಿ ಜಗಿದಿರುವ ಶಾಕಿಂಗ್ ಘಟನೆ ನಡೆದಿದೆ.

ಮೊಹಮದಾಬಾದ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಮಡ್ನಾಪುರ ಗ್ರಾಮದಲ್ಲಿ ಅಕ್ಷಯ್‌ ಎಂಬ ಮೂರು ವರ್ಷದ ಮಗು ತನ್ನ ಮನೆಯ ಅಂಗಳದಲ್ಲಿ ಆಡುತ್ತಿದ್ದ.ಈ ವೇಳೆ ಪೊದೆಯೊಂದರಿಂದ ಪುಟ್ಟ ಹಾವೊಂದು ಅಂಗಳಕ್ಕೆ ಬಂದಿದೆ. ಇದನ್ನು ನೋಡಿದ ಮಗು ಹಾವನ್ನು ಕೈಯಲ್ಲಿ ಹಿಡಿದು, ಅದನ್ನು ಬಾಯಿಯೊಳಗೆ ಹಾಕಿ ಜಗಿಯಲು ಶುರು ಮಾಡಿದ್ದಾನೆ. ಪರಿಣಾಮ ಹಾವು ಸತ್ತು ಹೋಗಿದೆ.

ಮಗುವಿನ ಕೈಯಲ್ಲಿದ್ದ ಹಾವನ್ನು ನೋಡಿ ಮಗುವಿನ ಅಜ್ಜಿ ಕಿರುಚಿಕೊಂಡಿದ್ದು, ಮಗುವಿನ ಕೈಯಿಂದ ಹಾವನ್ನು ತೆಗೆದು ಎಸೆದಿದ್ದಾರೆ. ಮಗುವನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅದರೊಂದಿಗೆ ಮಗುವಿನ ಬಾಯಿಯಿಂದ ಹೊರತೆಗೆದ ಸತ್ತ ಹಾವನ್ನೂ ತೆಗೆದುಕೊಂಡು ಹೋಗಿದ್ದಾರೆ.

ಆಸ್ಪತ್ರೆಯಲ್ಲಿ ಪರಿಶೀಲಿಸಿದ ವೈದ್ಯರು ಮಗು ಆರೋಗ್ಯದಿಂದ ಇರುವುದನ್ನು ದೃಢಪಡಿಸಿದ್ದಾರೆ.

ಮಗುವನ್ನು ಪರಿಶೀಲಿಸಿದ ವೈದ್ಯರು ಯಾವುದೇ ಅಪಾಯವಿಲ್ಲ ಎಂದು ತಿಳಿಸಿದ್ದಾರೆ.ಮಗುವಿಗೆ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಮನೆಗೆ ಕಳುಹಿಸಿದ್ದಾರೆ.

ಟಾಪ್ ನ್ಯೂಸ್