ವಿಷವಾಗಿರಬಹುದು ಎಂದು ಪೊಲೀಸ್ ಕಚೇರಿಯಲ್ಲಿ ಚಹಾ ಕುಡಿಯಲು ನಿರಾಕರಿಸಿದ ಅಖಿಲೇಶ್ ಯಾದವ್

ಉತ್ತರಪ್ರದೇಶ;ಯುಪಿ ಪೊಲೀಸ್ ಪ್ರಧಾನ ಕಚೇರಿಯಲ್ಲಿ ತಮಗೆ ನೀಡಿದ ಚಹಾ ವಿಷಪೂರಿತವಾಗಿರಬಹುದು ಎಂದು ಅಖಿಲೇಶ್ ಯಾದವ್ ಚಹಾ ಸೇವಿಸಲು ನಿರಾಕರಿಸಿರುವ ಪ್ರಸಂಗ ನಡೆದಿದೆ.

ಸಮಾಜವಾದಿ ಪಕ್ಷದ ಮುಖಂಡ ಮನೀಶ್ ಜಗನ್ ಅಗರ್ವಾಲ್ ಅವರ ಬಂದನದ ವಿರುದ್ಧ ಎಸ್ಪಿ ಕಾರ್ಯಕರ್ತರು ಉತ್ತರ ಪ್ರದೇಶ ಪೊಲೀಸ್ ಪ್ರಧಾನ ಕಚೇರಿಯ ಹೊರಗೆ ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಅಲ್ಲಿದ್ದ ಅಖಿಲೇಶ್‌ ಯಾದವ್‌ ರಿಗೆ ಚಹಾವನ್ನು
ನೀಡಲಾಗಿದ್ದು,ಅದನ್ನು ಸೇವಿಸಲು ಅವರು ನಿರಾಕರಿಸಿದರು.

ಚಹಾವನ್ನು ನಿರಾಕರಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

ಅಖಿಲೇಶ್ ಅವರು,ಇಲ್ಲಿನ ಚಹಾವನ್ನು ನಾನು ಕುಡಿಯುವುದಿಲ್ಲ,ನಾನು ಹೊರಗಿನಿಂದ ಚಹಾವನ್ನು ಕುಡಿಯುತ್ತೇನೆ,ಇಲ್ಲಿನ ಚಹಾ ವಿಷಪೂರಿತವಾಗಿದ್ದರೆ ಏನು ಮಾಡುವುದು?ಎಂದು ಪ್ರಶ್ನಿಸುವುದು ಕೇಳಿ ಬಂದಿದೆ.

ಟಾಪ್ ನ್ಯೂಸ್