“ಅಜ್ಮೀರ್ 92” ಚಿತ್ರವನ್ನು ಬ್ಯಾನ್ ಮಾಡುವಂತೆ ಆಗ್ರಹ; ವಿವಾದದಲ್ಲಿ ಅಜ್ಮೀರ್ ಕುರಿತ ಚಿತ್ರ

ನವದೆಹಲಿ: ಮುಂಬರುವ ಚಿತ್ರ “ಅಜ್ಮೀರ್ 92” ಸಮಾಜದಲ್ಲಿ “ವಿಭಜನೆ ಮತ್ತು ಬಿರುಕು” ಸೃಷ್ಟಿಸುತ್ತದೆ ಎಂದು ಜಮಿಯತ್ ಉಲಮಾ-ಇ-ಹಿಂದ್ ಅಧ್ಯಕ್ಷ ಮೌಲಾನಾ ಮಹಮೂದ್ ಮದನಿಯನ್ ಭಾನುವಾರ ಆರೋಪಿಸಿದ್ದಾರೆ.

JUH ಕೇಂದ್ರ ಸರ್ಕಾರವು ಈ ಚಲನಚಿತ್ರವನ್ನು ನಿಷೇಧಿಸಬೇಕು ಮತ್ತು “ಕೋಮುವಾದದ ಆಧಾರದ ಮೇಲೆ ಸಮಾಜವನ್ನು ವಿಭಜಿಸಲು ಪ್ರಯತ್ನಿಸುತ್ತಿರುವವರನ್ನು ನಿರುತ್ಸಾಹಗೊಳಿಸಬೇಕು ಎಂದು ಆಗ್ರಹಿಸಿದೆ.

ಖ್ವಾಜಾ ಮೊಯಿನುದ್ದೀನ್ ಚಿಶ್ತಿ ಅಜ್ಮೇರಿ ಅವರು ಹಿಂದೂ-ಮುಸ್ಲಿಂ ಐಕ್ಯತೆಗೆ ಉದಾಹರಣೆಯಾಗಿದ್ದರು ಮತ್ತು ಲಕ್ಷಾಂತರ ಜನರ ಹೃದಯವನ್ನು ಆಳಿದ ‘ನಿಜವಾದ ಸುಲ್ತಾನ್’ ಎಂದು ಮದನಿ ಬಣ್ಣಿಸಿದರು.

ಅಜ್ಮೀರ್ ಖ್ವಾಜಾ ಅವರು ದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆಯ ಸಂದೇಶವಾಹಕರಾಗಿ ಜನಪ್ರಿಯರಾಗಿದ್ದಾರೆ ಎಂದು ಅವರು ಹೇಳಿದರು. ಪ್ರಸ್ತುತ ದಿನಗಳಲ್ಲಿ ಸಮಾಜವನ್ನು ಧಾರ್ಮಿಕ ನೆಲೆಯಲ್ಲಿ ವಿಭಜಿಸಲು ವಿವಿಧ ಮಾರ್ಗಗಳು ಮತ್ತು ವಿಧಾನಗಳನ್ನು ಅನ್ವೇಷಿಸಲಾಗುತ್ತಿದೆ ಎಂದು JUH ಅಧ್ಯಕ್ಷರು ಹೇಳಿದ್ದಾರೆ.

ಕ್ರಿಮಿನಲ್ ಚಟುವಟಿಕೆಗಳನ್ನು ನಿರ್ದಿಷ್ಟ ಧರ್ಮದೊಂದಿಗೆ ಜೋಡಿಸಲು ಚಲನಚಿತ್ರಗಳು ಮತ್ತು ಸಾಮಾಜಿಕ ಮಾಧ್ಯಮಗಳನ್ನು ಬಳಸಲಾಗುತ್ತಿದೆ ಅದು ಖಂಡಿತವಾಗಿಯೂ ನಮ್ಮ ಪರಂಪರೆಗೆ ಹಾನಿ ಮಾಡುತ್ತದೆ ಎಂದು ಅವರು ಆರೋಪಿಸಿದ್ದಾರೆ.

ಟಾಪ್ ನ್ಯೂಸ್