ಬಿಯರ್ ಬಾಟಲಿಗಳನ್ನು ಸಾಗಿಸುತ್ತಿದ್ದ ವಾಹನ ಪಲ್ಟಿ; ವಾಹನದಲ್ಲಿದ್ದವರಿಗೆ ಏನಾಗಿದೆ ಎಂದು ನೋಡದೆ ಬಾಟಲಿಗಳನ್ನು ಕೊಂಡೊಯ್ದ ಜನ

ಬಿಯರ್ ಬಾಟಲಿಗಳನ್ನು ಸಾಗಿಸುತ್ತಿದ್ದ ವಾಹನ ಪಲ್ಟಿ; ವಾಹನದಲ್ಲಿದ್ದವರಿಗೆ ಏನಾಗಿದೆ ಎಂದು ನೋಡದೆ ಬಾಟಲಿಗಳನ್ನು ಕೊಂಡೊಯ್ದ ಜನ

ಆಂಧ್ರಪ್ರದೇಶ:ಬಿಯರ್ ಬಾಟಲಿಗಳನ್ನು ಸಾಗಿಸುತ್ತಿದ್ದ ವ್ಯಾನ್ ಪಲ್ಟಿಯಾಗಿದ್ದು, ಜನರು ವಾಹನದಲ್ಲಿದ್ದವರಿಗೆ ಏನಾಗಿದೆ ಎನ್ನುವುದನ್ನು ವಿಚಾರಿಸದೆ ಬಿಯರ್ ಬಾಟಲಿಗಳನ್ನು ಹೊತ್ತೊಯ್ದ ಘಟನೆ ಅನಕಾಪಲ್ಲಿ ಜಿಲ್ಲೆಯ ಕಾಶಿಂಕೋಟಾ ತಾಲೂಕಿನ ಬಯ್ಯವರಂ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಆಂಧ್ರದ ಬೆವರೇಜಸ್ ಕಾರ್ಪೊರೇಷನ್ ಗೋಡೌನ್ ಅನಕಾಪಲ್ಲಿಯಿಂದ ನರಸೀಪಟ್ಟಣಕ್ಕೆ ವ್ಯಾನ್ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ತಿಳಿದು ಬಂದಿಲ್ಲ.

ಆದರೆ ವ್ಯಾನ್ ಪಲ್ಟಿಯಾದಾಗ ಬಿಯರ್‌ನ ಕೆಲವು ಬಾಕ್ಸ್​ ಹರಿದು ಬಾಟೆಲ್​ಗಳು ಚೆಲ್ಲಾಪಿಲ್ಲಿಯಾಗಿವೆ.ಅಲ್ಲಿಗೆ ಬಂದ ಸ್ಥಳೀಯರು ಬಿಯರ್‌ ನ ರಸ್ತೆಗೆ ಬಿದ್ದಿದ್ದ ಬಾಟಲಿಗಳನ್ನು ತೆಗೆದುಕೊಂಡು ಕಾಲ್ಕಿತ್ತಿದ್ದಾರೆ.ರಸ್ತೆಯಲ್ಲಿ ಹೋಗುವವರೂ ಕೂಡ ತಮ್ಮ ಕಾರುಗಳು, ಬೈಕ್ ನಿಲ್ಲಿಸಿ ವ್ಯಾನ್ ಬಳಿ ಬಂದು ಸಿಕ್ಕಷ್ಟು ಬಿಯರ್​ಗಳನ್ನು ತೆಗೆದುಕೊಂಡು ಹೋಗಿದ್ದಾರೆ.

ಘಟನೆಯಿಂದ ವಾಹನ ಸಂಚಾರಕ್ಕೂ ತೀವ್ರ ಅಡಚಣೆ ಉಂಟಾಗಿದೆ.ಮಾಹಿತಿ ಪಡೆದು ಪೊಲೀಸರು ಸ್ಥಳಕ್ಕೆ ತಲುಪಿದಾಗ ಬಿಯರ್ ಬಾಟಲ್​ಗಳು ಮಾಯವಾಗಿದ್ದವು. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ನೂರಾರು ಮಂದಿ ವಾಹನದಲ್ಲಿದ್ದವರಿಗೆ ಏನಾಗಿದೆ ಎಂದು ಕೂಡ ನೋಡದೆ ಹೊಡೆಯದೆ ಇದ್ದ ಬಿಯರ್ ಬಾಟಲಿಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ಹೊಡೆದ ಬಾಟಲಿ ಬಿಟ್ಟರೆ ಕೆಲವೇ ಸೆಕೆಂಡುಗಳಲ್ಲಿ ಚೆನ್ನಾಗಿದ್ದ ಬಾಟೆಲ್​ಗಳು ಕಣ್ಮರೆಯಾಗಿದ್ದವು.

ಟಾಪ್ ನ್ಯೂಸ್