ಕಾಸರಗೋಡು;ಅಡ್ಕಸ್ಥಳ ಗಡಿ ಪ್ರದೇಶದ ಹೊಳೆಯಲ್ಲಿ ಶವವೊಂದು ಪತ್ತೆಯಾಗಿರುವ ಘಟನೆ ನಡೆದಿದೆ.
ಅಪರಿಚಿತ ಗಂಡಸಿನ ಮೃತದೇಹ ಇದಾಗಿದ್ದು ಗುರುತು ಪತ್ತೆಯಾಗಿಲ್ಲ.ಮೂರ್ನಾಲ್ಕು ದಿನಗಳ ಹಿಂದೆ ನೀರಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.
ಮೃತದೇಹ ಕರ್ನಾಟಕ ಭಾಗದಿಂದ ತೇಲಿ ಹೋದ ಕಾರಣ ವಿಟ್ಲ ಹಾಗೂ ಬದಿಯಡ್ಕ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಾಪತ್ತೆಯಾದವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.
ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂದು ಕೂಡ ತನಿಖೆ ನಡೆಯುತ್ತಿದೆ.
ಈ ಕುರಿತು ಬದಿಯಡ್ಕ ಠಾಣೆಯಲ್ಲಿ ಕೇಸ್ ದಾಖಲಾಗಿದೆ.