ಮೊಬೈಲ್ ನಲ್ಲಿ ಗೇಮ್ ಆಡುವಾಗ ಮೊಬೈಲ್ ಸ್ಪೋಟ, 8 ವರ್ಷದ ಬಾಲಕಿ ಮೃತ್ಯು

ತಿರುವನಂತಪುರಂ:ಮೊಬೈಲ್ ಗೇಮ್ ಆಡುವಾಗ ಕೈಯಲ್ಲಿ ಹಿಡಿದಿದ್ದ ಮೊಬೈಲ್ ಸ್ಫೋಟಗೊಂಡು 8 ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ದುರ್ಘಟನೆ ಕೇರಳದ ತಿರುವಿಲ್ವಾಮಲದಲ್ಲಿ ನಡೆದಿದೆ.

ಆದಿತ್ಯಶ್ರೀ ಮೃತ ಬಾಲಕಿ.ಈಕೆ ಮೂರನೇ ತರಗತಿ ಓದುತ್ತಿದ್ದಳು.

ಸೋಮವಾರ ರಾತ್ರಿ 10.30ರ ಹೊತ್ತಿಗೆ ಬಾಲಕಿ ಕೈಯಲ್ಲಿ ಮೊಬೈಲ್​ ಹಿಡಿದುಕೊಂಡು ವಿಡಿಯೊ ನೋಡುತ್ತ ಕುಳಿತಿದ್ದಳು.ಈ ವೇಳೆ ಮೊಬೈಲ್ ಬ್ಯಾಟರಿ ಹೀಟ್ ಆಗಿ ಸ್ಫೋಟವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ವಿಧಿವಿಜ್ಞಾನ ಪರೀಕ್ಷೆ ನಂತರವೇ ಸ್ಪಷ್ಟ ಕಾರಣ ಗೊತ್ತಾಗಲಿದೆ ಎಂದು ಅವರು ತಿಳಿಸಿದ್ದಾರೆ.ಈ ಫೋನ್​​ನ್ನು ಮೂರು ವರ್ಷಗಳ ಹಿಂದೆ ಖರೀದಿ ಮಾಡಲಾಗಿತ್ತು.

ಕಳೆದ ವರ್ಷ ಈ ಮೊಬೈಲ್ ಬ್ಯಾಟರಿಯನ್ನು ಬದಲಿಸಲಾಗಿತ್ತು.ಎಲ್ಲಿ ಮೊಬೈಲ್ ಖರೀದಿ ಮಾಡಲಾಗಿತ್ತೋ, ಅಲ್ಲೇ ಬ್ಯಾಟರಿಯನ್ನು ಬದಲು ಮಾಡಲಾಗಿತ್ತು ಎಂದು ಹೇಳಲಾಗಿದೆ.

ಘಟನೆಯಲ್ಲಿ ಬಾಲಕಿಯ ಮುಖಕ್ಕೆ ತೀವ್ರ ಗಾಯವಾಗಿತ್ತು. ಆಕೆಯ ಬಲಗೈ ಕೈಬೆರಳುಗಳು, ಅಂಗೈಯೆಲ್ಲ ತುಂಡಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಟಾಪ್ ನ್ಯೂಸ್

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ ಉದ್ವಿಗ್ನತೆ, ನಿಷೇಧಾಜ್ಞೆ ಜಾರಿ

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ ಹಣ ಪಡೆಯಲು ಯತ್ನಿಸಿದ ಮಹಿಳೆ; ವಿಷಯ ಗೊತ್ತಾಗಿ ಪತಿಯೇ ಪತ್ನಿಯ ವಿರುದ್ಧ ದೂರು ಕೊಟ್ಟ!

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ

ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆ; ಮಕ್ಕಳು ಆಟವಾಡುವಾಗ ಆಕಸ್ಮಿಕವಾಗಿ ಉಸಿರುಗಟ್ಟಿ ಮೃತಪಟ್ಟಿರುವ ಶಂಕೆ

ನವದೆಹಲಿ; ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿರುವ ಶಾಕಿಂಗ್ ಘಟನೆ ರಾಷ್ಟ್ರ

Developed by eAppsi.com