ನಾಪತ್ತೆಯಾಗಿದ್ದ ಬಾಲಕರಾದ ಆದಿಲ್ & ಹಸನ್ ಮೃತದೇಹ ಪತ್ತೆ

-ಮೊಹಮ್ಮದ್ ಆದಿಲ್ (18) ಮತ್ತು ಆದಿಲ್ ಹಸನ್ (16) ಮೃತರು.

ಕೋಝಿಕ್ಕೋಡ್: ಇಲ್ಲಿನ ಕಡಲತೀರದಲ್ಲಿ ಆಟವಾಡುತ್ತಿದ್ದ ಒಲವನ್ನಾ ಮೂಲದ ಇಬ್ಬರು ಯುವಕರು ಸಮುದ್ರದಲ್ಲಿ ನಾಪತ್ತೆಯಾಗಿದ್ದು, ಇದೀಗ ಅವರ ಮೃತದೇಹ ಪತ್ತೆಯಾಗಿದೆ.

ಮೂವರು ಯುವಕರು ಸಮುದ್ರದಲ್ಲಿ ಸಂಕಷ್ಟದಲ್ಲಿರುವುದನ್ನು ಗಮನಿಸಿದ ವ್ಯಕ್ತಿಯೊಬ್ಬ ಹದಿಹರೆಯದ ಯುವಕನನ್ನು ಸುರಕ್ಷಿತವಾಗಿ ಎಳೆದೊಯ್ದಿದ್ದರಿಂದ ಓರ್ವ ಬಾಲಕ ಸ್ವಲ್ಪದರಲ್ಲೇ ಪಾರಾಗಿದ್ದಾನೆ.

ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಮೀನುಗಾರರು ಶೋಧ ಕಾರ್ಯ ನಡೆಸಿದಾಗ ಇಬ್ಬರು ಬಾಲಕರ ಮೃತದೇಹ ಪತ್ತೆಯಾಗಿದೆ.

ಮೊಹಮ್ಮದ್ ಆದಿಲ್ (18) ಮತ್ತು ಆದಿಲ್ ಹಸನ್ (16) ಸ್ನೇಹಿತರೊಂದಿಗೆ ಲಯನ್ಸ್ ಪಾರ್ಕ್ ಬಳಿ ಫುಟ್‌ಬಾಲ್ ಆಡುತ್ತಾ ಬಳಿಕ ಸಮುದ್ರಕ್ಕೆ ಇಳಿದಿದ್ದರು.ಈ ವೇಳೆ ಅವಘಡ ಸಂಭವಿಸಿದೆ.

ಘಟನೆ ನಡೆದ ಬಳಿಕ ಶೋಧ ಕಾರ್ಯ ನಡೆಸಲಾಗಿದೆ. ಖಾಸಗಿ ದೋಣಿ ಮೂಲಕವು ಶೋಧ ನಡೆಸಲಾಗಿತ್ತು.ಇದೀಗ ಮೃತದೇಹ ಪತ್ತೆಯಾಗಿದೆ ಎಂದು ವರದಿಯಾಗಿದೆ.

ಟಾಪ್ ನ್ಯೂಸ್