ನಿಮ್ಮ ಪಾನ್ ಕಾರ್ಡ್- ಆಧಾರ್ ಜೊತೆ ಲಿಂಕ್ ಆಗಿದೆಯಾ ಎಂದು ಸುಲಭವಾಗಿ ಪರಿಶೀಲಿಸುವುದು ಹೇಗೆ ಗೊತ್ತಾ? ಇಲ್ಲಿದೆ ಮಾಹಿತಿ

ಪಾನ್ ಕಾರ್ಡ್ ಗೆ ಆಧಾರ್‌ಲಿಂಕ್‌ ಗೆ ಮಾ.31 ಕೊನೆಯ ದಿನ ಎಂದು ಹೇಳಲಾಗುತ್ತಿದೆ.ಆ ಬಳಿಕ ದುಬಾರಿ ದಂಡ ಬೀಳುತ್ತದೆ ಎನ್ನುವುದು ಭಾರೀ ಚರ್ಚೆಯಾಗುತ್ತಿದೆ.ಈ ಬಗ್ಗೆ ಜನರ ಭಾರೀ ವಿರೋಧವೂ ವ್ಯಕ್ತವಾಗುತ್ತಿದೆ.ಇದರ ಮಧ್ಯೆ ಆಧಾರ್-ಪಾನ್ ಲಿಂಕ್ ಮಾಡಲು ಜನರು ಸೈಬರ್ ಗಳ ಮುಂದೆ ಮುಗಿಬಿದ್ದಿದ್ದಾರೆ. ಲಿಂಕ್ ಮಾಡುವ ಕೆಲಸ ಭರದಿಂದ ಸಾಗುತ್ತಿದೆ.

ಈ‌ ಮಧ್ಯೆ ಸೈಬರ್ ಸೆಂಟರ್ ಗಳು ಆದಾಯ ತೆರಿಗೆ ಅಧಿಕೃತ ವೆಬ್ ಸೈಟ್ ಗಳಲ್ಲಿ ಲಿಂಕ್ ಮಾಡದೇ ಬೇರೆ ಬೇರೆ ಸೈಟ್ ಗಳಿಂದಲೂ ಮಾಡುತ್ತಿರೋದಾಗಿ ಹೇಳಲಾಗುತ್ತಿದೆ. ಇದು ನಿಮ್ಮ ದತ್ತಾಂಶವನ್ನು ಆನ್ ಲೈನ್ ವಂಚಕರ ಪಾಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ನಿಮ್ಮ ಪಾನ್ ಕಾರ್ಡ್ ಗೆ ಆಧಾರ್ ಸಂಖ್ಯೆ ಲಿಂಕ್ ಆಗಿದೆಯಾ ಎಂದು ಪರೀಕ್ಷಿಸಲು ಈ ಕೆಳಗಿನ ವಿಧಾನ ಅನುಸರಿಸಿ….

-ಮೊದಲು ನೀವು ಆದಾಯ ತೆರಿಗೆ ಇಲಾಖೆಯ ಅಧಿಕೃತ ಜಾಲತಾಣ https://www.incometax.gov.in/iec/foportal/ ಈ ಲಿಂಕ್ ಭೇಟಿ ನೀಡಬೇಕು

-ಬಳಿಕ ಲಿಂಕ್ ಆಧಾರ್ ಸ್ಟೇಟಸ್ ಎಂಬುವುದನ್ನು press ಮಾಡಬೇಕು

-ಬಳಿಕ ನಿಮ್ಮ ಆಧಾರ್ ಹಾಗೂ ಪಾನ್ ನಂಬರನ್ನು ಗೊತ್ತುಪಡಿಸಿದ ಸ್ಥಳದಲ್ಲಿ ನಮೂದಿಸಿ ನಿಮ್ಮ ಪಾನ್ ಕಾರ್ಡ್ ಆಧಾರ್ ಗೆ ಲಿಂಕ್ ಆಗಿದೆಯಾ ಎಂದು ಪರಿಶೀಲಿಸಿ…

ಲಿಂಕ್ ಆಗಿಲ್ಲ ಎಂದಾದರೆ ಮತ್ತೆ ವಾಪಾಸ್ಸು ಹಿಂದಕ್ಕೆ ಬಂದು website ನಲ್ಲಿ ಲಿಂಕ್ ಆಧಾರ್ ಎಂಬ ಆಯ್ಕೆಯನ್ನು ಒತ್ತಿ, ಅದರಲ್ಲಿ ಸೂಚಿಸಿದ ನಿಯಮಾವಳಿಗಳ ಮೂಲಕ ಲಿಂಕ್ ಮಾಡಬೇಕಿದೆ.

ಟಾಪ್ ನ್ಯೂಸ್

ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಮೀಲಾದ್ ರ್ಯಾಲಿಯಲ್ಲಿ ತೆರಳುತ್ತಿದ್ದ ಯುವಕರು

ಕಾಪು;ಮೀಲಾದ್ ರ್ಯಾಲಿಯಲ್ಲಿ ಸಾಗುತ್ತಿದ್ದ ಯುವಕರ ಗುಂಪು ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ