ಮಂಡ್ಯ;ಸಂಸದೆ ಸುಮಲತಾ ನಿನ್ನೆ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಮತ್ತು ಪ್ರಧಾನಿ ಮೋದಿಗೆ ಬೆಂಬಲ ಘೋಷಿಸಿದ್ದಾರೆ.
ಸುಮಲತಾ ಅಂಬರೀಶ್ ಕೇಂದ್ರ ಸರ್ಕಾರದ ಯೋಜನೆಗಳನ್ನು ಹೊಗಳಿ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಆದರೆ ಸಂಪೂರ್ಣ ಬೆಂಬಲ ಘೋಷಿಸಿದರೂ ಅವರು ಬಿಜೆಪಿ ಸೇರ್ಪಡೆಯಾಗಿಲ್ಲ.ಇದು ಯಾಕೆ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ…
ಸಂವಿಧಾನದ 10ನೇ ಶೆಡ್ಯೂಲ್ ನಲ್ಲಿ ಸ್ವತಂತ್ರವಾಗಿ ಚುನಾವಣೆಗೆ ನಿಂತು ಗೆದ್ದ ಅಭ್ಯರ್ಥಿ ರಾಜಕೀಯ ಪಕ್ಷ ಸೇರಲು ಆಯ್ಕೆಯಾದ 6 ತಿಂಗಳಿನಲ್ಲಿ ಅವಕಾಶ ಇದೆ. ಬಳಿಕ ಪಕ್ಷ ಸೇರಿದರೆ ಸಂಸದ ಅಥವಾ ಶಾಸಕ ಸ್ಥಾನ ಕಳೆದುಕೊಳ್ಳುತ್ತಾರೆ.ಅವರನ್ನು ಅನರ್ಹಗೊಳಿಸಲು ಅವಕಾಶವಿದೆ.
ಪಕ್ಷೇತರ ಅಭ್ಯರ್ಥಿ ಅವಧಿ ಮೀರಿ ರಾಜಕೀಯ ಪಕ್ಷ ಸೇರಬೇಕಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.ಒಂದು ವೇಳೆ ಈಗ ಸುಮಲತಾ ಬಿಜೆಪಿ ಸೇರಬೇಕು ಎಂದರೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.ಇಲ್ಲವಾದಲ್ಲಿ ಅವರು ಸಂಸದ ಸ್ಥಾನಕ್ಕೆ ಅನರ್ಹರಾಗುವ ಸಾಧ್ಯತೆ ಇದೆ.
ಸುಮಲಾತಾ ಅವರ ಅವಧಿ ಇನ್ನು ಕೂಡ ಒಂದು ವರ್ಷ ಇರುವ ಕಾರಣ ಕಾನೂನು ತಜ್ಞರ ಜೊತೆ ಚರ್ಚಿಸಿ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.