ಯುವಕನ ಜೊತೆ ಅಸಭ್ಯವಾಗಿ ವರ್ತಿಸಿದ ನಟಿ; ಲೈಂಗಿಕ ದೌರ್ಜನ್ಯದ ಕೇಸ್ ಹಾಕಿ ಎಂದ ನೆಟ್ಟಿಗರು

ಬಿಗ್​ಬಾಸ್​ನ ಮಾಜಿ ಸ್ಪರ್ಧಿ ಶೆರ್ಲಿನ್​ ಚೋಪ್ರಾ ಮುಂಬೈ ವಿಮಾನ ನಿಲ್ದಾಣದಲ್ಲಿ ಯುವಕನೋರ್ವನ ಜೊತೆ ಅಸಭ್ಯವಾಗಿ ವರ್ತಿಸಿದ ವಿಡಿಯೋ ವೈರಲ್ ಆಗಿದೆ.ಇದರ ಬೆನ್ನಲ್ಲೇ ಶೆರ್ಲಿನ್ ವಿರುದ್ಧ ಕ್ರಮಕ್ಕೆ ನೆಟ್ಟಿಗರು ಆಗ್ರಹಿಸಿದ್ದಾರೆ.

ಶೆರ್ಲಿನ್ ಒಬ್ಬ ಯುವಕನನ್ನು ಎಳೆದುಕೊಂಡು ಅಸಭ್ಯವಾಗಿ ವರ್ತಿಸಿ ಆತನ ಜೊತೆಯಲ್ಲಿ ಡ್ಯಾನ್ಸ್ ಗೆ ಯತ್ನಿಸಿರುವುದು
ವಿಡಿಯೋದಲ್ಲಿ ಕಂಡು ಬಂದಿದೆ.ಈ ವೇಳೆ ಯುವಕ
ನಾಚಿಕೆಪಟ್ಟು ಅದನ್ನು ವಿರೋಧಿಸಲು ಪ್ರಯತ್ನಿಸುತ್ತಾನೆ. ಆದರೂ ಶೆರ್ಲಿನ್ ಅವನನ್ನು ತನ್ನ ಹತ್ತಿರಕ್ಕೆ ಎಳೆದಿದ್ದಾರೆ.

ಕೆಲವು ಟ್ವಿಟ್ಟರ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿದ್ದು,ಶೆರ್ಲಿನ್​ ವಿರುದ್ಧ ಲೈಂಗಿಕ ದೌರ್ಜನ್ಯದ ಕೇಸ್​ ಹಾಕಬೇಕು ಎಂದು ಆಗ್ರಹಿಸಿದ್ದಾರೆ. ಇನ್ನೂ ಕೆಲವರು ಈ ಮಹಿಳೆ ಎಲ್ಲಿರ್ತಾಳೋ ಅಲ್ಲಿ ಅಸಭ್ಯ ವರ್ತನೆ ಇರುತ್ತದೆ. ಇದು ಪುರುಷರ ಮೇಲೆ ನಡೆದ ಲೈಂಗಿಕ ದೌರ್ಜನ್ಯವಲ್ಲದೇ ಇನ್ನೇನು ಎಂದಿದ್ದಾರೆ.

ಈ ವಿಡಿಯೋವನ್ನು ಕೆಲವರು ಮುಂಬೈ ಪೊಲೀಸರನ್ನು ಟ್ಯಾಗ್​ ಮಾಡಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಟಾಪ್ ನ್ಯೂಸ್