ಮುಂಬೈ; ಬಾಲಿವುಡ್ ನಟಿ ರಾಖಿ ಸಾವಂತ್ ಅವರ ತಾಯಿ ಜಯಾ ಭೇದಾ ಸಾವಂತ್ ಅವರು ನಿಧನರಾಗಿದ್ದಾರೆ.
ಸುದೀರ್ಘ ಕಾಲದಿಂದ ಕ್ಯಾನ್ಸರ್ ಹಾಗೂ ಬ್ರೇನ್ ಟ್ಯೂಮರ್‌ನಿಂದ ಬಳಲುತ್ತಿದ್ದ ಜಯಾ ಭೇದಾ, ಮುಂಬೈನ ಜುಹು ಪ್ರದೇಶದಲ್ಲಿರುವ ಸಿಟಿ ಕೇರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಶನಿವಾರ ಸಂಜೆ ಮೃತದೇಹವನ್ನು ಆಸ್ಪತ್ರೆಯಿಂದ ಅಂತಿಮ ವಿಧಿ ವಿಧಾನಕ್ಕಾಗಿ ತೆಗೆದುಕೊಂಡು ಹೋಗಲಾಗಿದೆ.
ರಾಖಿ ಸಾವಂತ್ ತಾಯಿಯ ನಿಧನಕ್ಕೆ ಬಾಲಿವುಡ್‌ನ ಹಲವರು ಕಂಬನಿ ಮಿಡಿದಿದ್ದಾರೆ. ತಾಯಿಯನ್ನು ಕಳೆದುಕೊಂಡು ರಾಖಿ ಸಾವಂತ್ ದುಃಖತಪ್ತರಾಗಿದ್ದಾರೆ.