ಖ್ಯಾತ ನಟಿಗೆ ದೇವಸ್ಥಾನಕ್ಕೆ ಪ್ರವೇಶಿಸಿದಂತೆ ತಡೆ;ಧರ್ಮದ ಆಧಾರದಲ್ಲಿ ಅಲ್ಲ ನಮ್ಮನ್ನು ಮನುಷ್ಯರಂತೆ ಕಾಣಬೇಕಿದೆ ಎಂದ ನಟಿ

ಕೇರಳ;ಎರ್ನಾಕುಲಂನಲ್ಲಿರುವ ತಿರುವೈರಾನಿಕುಲಂ ಮಹಾದೇವ ದೇವಸ್ಥಾನಕ್ಕೆ ಪ್ರವೇಶಿಸಲು ಅಧಿಕಾರಿಗಳು “ಧಾರ್ಮಿಕ ತಾರತಮ್ಯ” ದಿಂದ ಅನುಮತಿ ನಿರಾಕರಿಸಿದ್ದಾರೆ ಎಂದು ನಟಿ ಅಮಲಾ ಪೌಲ್ ಆರೋಪಿಸಿದ್ದಾರೆ.

ದೇವಸ್ಥಾನದ ಅಧಿಕಾರಿಗಳು ಸೋಮವಾರ ದೇವಸ್ಥಾನಕ್ಕೆ ಭೇಟಿ ನೀಡಿದಾಗ, ಆವರಣದೊಳಗೆ ಹಿಂದೂಗಳನ್ನು ಮಾತ್ರ ಅನುಮತಿಸುವ ಸಂಪ್ರದಾಯಗಳನ್ನು ಉಲ್ಲೇಖಿಸಿ ದೇವಸ್ಥಾನದ ಅಧಿಕಾರಿಗಳು ದರ್ಶನವನ್ನು ನಿರಾಕರಿಸಿದರು ಎಂದು ನಟಿ ಹೇಳಿಕೊಂಡಿದ್ದಾರೆ.

ರಸ್ತೆಯಲ್ಲೇ ದೇವರ ದರ್ಶನ ಮಾಡಿ, ಪ್ರಸಾದ ಸ್ವೀಕರಿಸಿ ಅಮಲಾ ಅವರು ಹಿಂದಿರುಗಿದ ಘಟನೆ ನಡೆದಿದೆ.

ಗುರುವಾಯೂರು ದೇವಸ್ಥಾನದಂತೆ ತಿರುವೈರಾಣಿಕ್ಕುಳಂ ಮಹಾದೇವ ದೇವಸ್ಥಾನದಲ್ಲೂ ಹಿಂದುಗಳಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ. ಅಧಿಕಾರಿಗಳು ದೇವಸ್ಥಾನದ ಸಂಪ್ರದಾಯಗಳನ್ನು ಮಾತ್ರ ಅನುಸರಿಸಿದ್ದಾರೆ ಎಂದು ದೇವಸ್ಥಾನದ ಟ್ರಸ್ಟ್ ಕಾರ್ಯದರ್ಶಿ ಪ್ರಸೂನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಅಮಲಾ ಪೌಲ್ ಅವರು ಪ್ರತಿಕ್ರಿಯೆ ನೀಡಿದ್ದು, 2023ರಲ್ಲಿ ಧಾರ್ಮಿಕ ತಾರತಮ್ಯ ಇನ್ನೂ ಅಸ್ತಿತ್ವದಲ್ಲಿದೆ ಎಂದು ತಿಳಿದು ನಾನು ತುಂಬಾ ದುಃಖಿತಳಾಗಿದ್ದೇನೆ ಮತ್ತು ನಿರಾಶೆಗೊಂಡಿದ್ದೇನೆ ಎಂದಿದ್ದಾರೆ. ಆದರೆ, ನಾನು ದೂರದಿಂದಲೇ ದೇವಿಯ ಅನುಗ್ರಹವನ್ನು ಪಡೆದೆ. ಧಾರ್ಮಿಕ ತಾರತಮ್ಯದಲ್ಲಿ ಶೀಘ್ರದಲ್ಲೇ ಬದಲಾವಣೆ ಕಾಣುತ್ತೇನೆಂದು ಭಾವಿಸುತ್ತೇನೆ. ಧರ್ಮದ ಆಧಾರದಲ್ಲಿ ಅಲ್ಲ ನಮ್ಮನ್ನು ಮನುಷ್ಯರಂತೆ ಕಾಣುವ ಕಾಲ ಬರಲಿದೆ ಎಂದು ಅಮಲಾ ದೇವಸ್ಥಾನದ ರಿಜಿಸ್ಟರ್‌ ಬುಕ್​ನಲ್ಲಿ ಬರೆದಿದ್ದಾರೆ.

ಟಾಪ್ ನ್ಯೂಸ್