ನಟ ಪ್ರಕಾಶ್ ರಾಜ್ ಗೆ ಜೀವ ಬೆದರಿಕೆ ಹಾಕಿದ ವಿಡಿಯೋ ವೈರಲ್‌‌..

ಬಹುಭಾಷಾ ನಟ ಪ್ರಕಾಶ್‌ ರಾಜ್‌ ಅವರಿಗೆ ವ್ಯಕ್ತಿಯೋರ್ವ ಜೀವ ಬೆದರಿಕೆ ಹಾಕಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸೌಜನ್ಯ ಪ್ರಕರಣದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಪ್ರಕಾಶ್‌ ರಾಜ್‌,ಗುಪ್ತಚರ ಇಲಾಖೆಗೆ ಅನುಮಾನಗಳಿದ್ದರೆ ಧರ್ಮಾಧಿಕಾರಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದ್ದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ವ್ಯಕ್ತಿ,ವಿಡಿಯೋದಲ್ಲಿ ತುಕ್ಡೆ ಗ್ಯಾಂಗ್ ಪ್ರಕಾಶ್ ರಾಜ್, ದೇಶದ್ರೋಹಿ ಪ್ರಕಾಶ್ ರಾಜ್ ಎಂದು ಹೇಳಿದ್ದಾರೆ. ಪ್ರಕಾಶ್ ರಾಜ್ ಧರ್ಮಾಧಿಕಾರಿಗಳ ಕ್ಷಮೆ ಕೇಳಬೇಕು.ಇಲ್ಲವಾದರೆ 24 ಗಂಟೆಯೊಳಗಡೆ ನಿನ್ನ ಮನೆ ಮುಂದೆ ನಿನ್ನ ಹೆಣ ಬಿದ್ದಿರುತ್ತದೆ.ಪ್ರಕಾಶ್ ರಾಜ್ ನಿನ್ನನ್ನೇ ಅರೋಪಿ ಎಂದು ಕರೆಯಲೇ ಎಂದು ಪ್ರಶ್ನಿಸಿದ್ದಾನೆ.

ಈ ಬಗ್ಗೆ ವಿಡಿಯೋ ಹಂಚಿಕೊಂಡ ಪ್ರಕಾಶ್‌ ರಾಜ್‌, ಮುಖ್ಯಮಂತ್ರಿ ಸಿದ್ದರಾಮಯ್ಯ,ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌,ಗೃಹ ಸಚಿವ ಡಾ.ಜಿ ಪರಮೇಶ್ವರ್‌ ಮತ್ತು ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಟ್ಯಾಗ್‌ ಮಾಡಿದ್ದಾರೆ.

ಟಾಪ್ ನ್ಯೂಸ್