ಹಾಸ್ಯ ಚಕ್ರವರ್ತಿ ಚಾರ್ಲಿ ಚಾಪ್ಲಿನ್‌ ಪುತ್ರಿ ಜೋಸೆಫಿನ್‌ ಚಾಪ್ಲಿನ್‌ ನಿಧನ

ಹಾಲಿವುಡ್‌ ದಂತಕಥೆ, ಹಾಸ್ಯ ಚಕ್ರವರ್ತಿ ಚಾರ್ಲಿ ಚಾಪ್ಲಿನ್‌ ಪುತ್ರಿ ನಟಿ ಜೋಸೆಫಿನ್‌ ಚಾಪ್ಲಿನ್‌ ನಿಧನ ಹೊಂದಿರುವುದಾಗಿ ಅಮೆರಿಕ ಮೂಲದ ವೆರೈಟಿ ಡಾಟ್‌ ಕಾಮ್‌ ವರದಿ ಮಾಡಿದೆ

ಚಾಪ್ಲಿನ್‌ ಕುಟುಂಬ ಹೊರಡಿಸಿರುವ ಪ್ರಕಟಣೆ ಪ್ರಕಾರ, ಜೋಸೆಫಿನ್‌ ಚಾಪ್ಲಿನ್‌(77) ಜುಲೈ 13ರಂದು ಪ್ಯಾರೀಸ್‌ ನಲ್ಲಿ ಕೊನೆಯುಸಿರೆಳೆದಿರುವುದಾಗಿ ತಿಳಿಸಿದೆ.

1949ರ ಮಾರ್ಚ್‌ 28ರಂದು ಜೋಸೆಫಿನ್‌ ಕ್ಯಾಲಿಫೋರ್ನಿಯಾದ ಮೋನಿಕಾದಲ್ಲಿ ಜನಿಸಿದ್ದರು.

ಜೋಸೆಫಿನ್‌, ಚಾರ್ಲಿ ಚಾಪ್ಲಿನ್‌ ಮತ್ತು ಊನಾ ಓನೀಲ್‌ ಗೆ ಜನಿಸಿದ ಎಂಟು ಮಕ್ಕಳಲ್ಲಿ ಮೂರನೇಯವರಾಗಿದ್ದಾರೆ. ಜೋಸೆಫಿನ್‌ ಚಿಕ್ಕ ವಯಸ್ಸಿನಲ್ಲಿಯೇ ನಟನೆ ಆರಂಭಿಸಿದ್ದರು.

1952ರಲ್ಲಿ ತಂದೆ ಚಾರ್ಲಿ ಚಾಪ್ಲಿನ್‌ ನಿರ್ದೇಶನದ ಲೈಮ್‌ ಲೈಟ್‌ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ತಮ್ಮ ಸಿನಿ ಜೀವನಕ್ಕೆ ಪದಾರ್ಪಣೆ ಮಾಡಿದ್ದರು.

ಟಾಪ್ ನ್ಯೂಸ್