ಉದ್ಯಮಿ ಮಹಿಳೆ ಜೊತೆ ಎರಡನೇ ವಿವಾಹವಾದ ಖ್ಯಾತ ನಟ ಆಶಿಶ್ ವಿದ್ಯಾರ್ಥಿ

ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ಅವರು ಉದ್ಯಮಿ ರೂಪಾಲಿ ಬರುವಾ ಅವರೊಂದಿಗೆ ಕೊಲ್ಕತಾ ಕ್ಲಬ್​ನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ವಿವಾಹವಾಗಿದ್ದಾರೆ.

ಆಶಿಶ್ ಹಾಗೂ ರೂಪಾಲಿ ತಮ್ಮ ಆಪ್ತ ಸ್ನೇಹಿತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ರಿಜಿಸ್ಟರ್ ಮದುವೆಯಾಗಿದ್ದಾರೆ.

ಇಬ್ಬರಿಗೂ ಸರಳವಾಗಿ ಮದುವೆ ಆಗಬೇಕು ಎಂಬ ಬಯಕೆ ಇತ್ತು.ಅದರಂತೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇವೆ. ಇಂದು ಬೆಳಗ್ಗೆ ರಿಜಿಸ್ಟರ್ ಮದುವೆಯಾಗಿದ್ದು, ಸಂಜೆ ಸಣ್ಣ ಗೆಟ್ ಟು ಗೆದರ್ ನಡೆಯಲಿದೆ ಎಂದು ಆಶಿಶ್ ವಿದ್ಯಾರ್ಥಿ ಸ್ಪಷ್ಟನೆ ಕೊಟ್ಟಿದ್ದಾರೆ.

ಗುವಾಹಟಿ ಮೂಲದ ರೂಪಾಲಿ, ಕೊಲ್ಕತಾದಲ್ಲಿ ದೊಡ್ಡಮಟ್ಟದಲ್ಲಿ ಫ್ಯಾಷನ್ ಅಂಗಡಿ ಹೊಂದಿದ್ದಾರೆ.

ಈ ಹಿಂದೆ ಖ್ಯಾತ ನಟಿ ಶಕುಂತಲಾ ಬರುವಾ ಅವರ ಪುತ್ರಿ ನಟಿ, ರಂಗಭೂಮಿ ಕಲಾವಿದೆ ಹಾಗೂ ಗಾಯಕಿ ರಾಜೋಶಿ ಬರುವಾ ಅವರನ್ನು ಆಶೀಶ್ ವಿದ್ಯಾರ್ಥಿ ವಿವಾಹವಾಗಿದ್ದರು.

ಬಹುಭಾಷಾ ನಟರಾಗಿರುವ ಆಶೀಶ್ ವಿದ್ಯಾರ್ಥಿ, ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂ ಮರಾಠಿ ಚಿತ್ರಗಳಲ್ಲಿ ನಟಿಸಿದ್ದಾರೆ. ಕಾಲ್ ಸಂಧ್ಯಾ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಆಶೀಶ್ ವಿದ್ಯಾರ್ಥಿ, ಕನ್ನಡದಲ್ಲಿ ಕೋಟಿಗೊಬ್ಬ, ನಮ್ಮಣ್ಣ, ತಂದೆಗೆ ತಕ್ಕ ಮಗ, ಎಕೆ 47 ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಟಾಪ್ ನ್ಯೂಸ್