ಕಾಸರಗೋಡು; 8 ವರ್ಷದ ಬಾಲಕ ಬಾವಿಗೆ ಬಿದ್ದು ಸಾವು

-ಅಬ್ದುಲ್ ರಹಮಾನ್ ಬಾಖವಿರವರ ಪುತ್ರ ಆಶಿಕ್ ಮೃತ

ಕಾಸರಗೋಡು: ಎಂಟು ವರ್ಷದ ಬಾಲಕ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಬೇಕಲ ಸಮೀಪದ ಕುನಿಯದಲ್ಲಿ ನಡೆದಿದೆ.

ಕುನಿಯ ಹದ್ದಾದ್ ನಗರದ ಅಬ್ದುಲ್ ರಹಮಾನ್ ಬಾಖವಿ ರವರ ಪುತ್ರ ಆಶಿಕ್(8) ಮೃತ ಬಾಲಕ.

ಬಾಲಕ ನಾಪತ್ತೆಯಾದ ಹಿನ್ನಲೆಯಲ್ಲಿ ಶೋಧ ನಡೆಸಿದಾಗ ಬಾವಿಗೆ ಬಿದ್ದಿರುವುದು ಕಂಡು ಬಂದಿದ್ದು, ಪರಿಸರ ನಿವಾಸಿಗಳು ಮೇಲಕ್ಕೆತ್ತಿ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಳಿಲ್ಲ.

ಬಾಲಕನ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದೆ.

ಟಾಪ್ ನ್ಯೂಸ್