ಅಬುಧಾಬಿಯ ಜನಪ್ರಿಯ ಸೀರೀಸ್ 250 ಬಿಗ್ ಟಿಕೆಟ್ ಲೈವ್ ಡ್ರಾ ಲಾಟರಿಯಲ್ಲಿ ಬೆಂಗಳೂರು ಮೂಲದ ಅರುಣ್ ಕುಮಾರ್ 44,75,67,571ರೂ. ಗಳ ಬಹುಮಾನ ಗೆದ್ದುಕೊಂಡಿದ್ದಾರೆ.
ಅಬುಧಾಬಿಯಲ್ಲಿ ನಡೆದ ಬಿಗ್ ಟಿಕೆಟ್ ಡ್ರಾ ಸರಣಿ 250 ರಲ್ಲಿ ಬೆಂಗಳೂರಿನ ನಿವಾಸಿ ಅರುಣ್ ಕುಮಾರ್ ವಟಕ್ಕೆ 1 ಮಿಲಿಯನ್ ಗೆದ್ದಿದ್ದಾರೆ. ಮಾರ್ಚ್ 22 ರಂದು 261031 ರ ವಿಜೇತ ಟಿಕೇಟ್ ಹೊಂದಿರುವ ಅರುಣ್ ಅವರಿಗೆ 20 ಮಿಲಿಯನ್ ದಿರ್ಹಂ (ಸುಮಾರು ರೂ 44,75,67,571) ಬಹುಮಾನ ನೀಡಲಾಯಿತು.
ಈ ಬಗ್ಗೆ ಅರುಣ್ ಖಲೀಜ್ ಟೈಮ್ಸ್‌ನೊಂದಿಗೆ ಮಾತನಾಡಿ, ಬಿಗ್ ಟಿಕೆಟ್‌ನಿಂದ ಕರೆ ಸ್ವೀಕರಿಸಿದ ನಂತರ, ಇದು ನಕಲಿ, ತಮಾಷೆ ಎಂದು ನಾನು ಭಾವಿಸಿದೆ, ನಾನು ಲೈನ್ ನ್ನು ಸಂಪರ್ಕ ಕಡಿತಗೊಳಿಸಿದೆ ಮತ್ತು ಆ ಸಂಖ್ಯೆಯನ್ನು ಬ್ಲಾಕ್ ಮಾಡಿದೆ. ಸ್ವಲ್ಪ ಸಮಯದ ನಂತರ, ನನಗೆ ಬೇರೆ ಸಂಖ್ಯೆಯಿಂದ ಕರೆ ಬಂದಿತು ಎಂದು ಹೇಳಿದ್ದಾರೆ.
ನಾನು ಪ್ರಥಮ ಬಹುಮಾನ ಪಡೆದಿದ್ದೇನೆ ಎಂದು ನಂಬಲಾಗಲಿಲ್ಲ.ನಾನು ಇನ್ನೂ ಅಪನಂಬಿಕೆಯಲ್ಲಿದ್ದೇನೆ. ನಾನು ಮೊದಲು ಎರಡು ಟಿಕೆಟ್ ನ್ನು ಖರೀದಿಸಿದೆ. ಅದರಲ್ಲಿ ನನಗೆ ಒಂದು ಟಿಕೆಟ್ ಉಚಿತವಾಗಿ ಸಿಕ್ಕಿತ್ತು ಎಂದು ಹೇಳಿದ್ದಾರೆ.
ಗಲ್ಪ್ ನ್ಯೂಸ್ ಪ್ರಕಾರ, ತನ್ನ ಗೆಳೆಯರಿಂದ ಬಿಗ್ ಟಿಕೆಟ್ ಲೈವ್ ಬಗ್ಗೆ ಕೇಳಿ ತಿಳಿದುಕೊಂಡ ಅರುಣ್, ಆನ್ಲೈನ್‌ನಲ್ಲಿ ಟಿಕೆಟ್‌ಗಳನ್ನು ಖರೀದಿ ಮಾಡಲು ಆರಂಭಿಸಿದ್ದರು. ಮಾರ್ಚ್ 22ರಂದು ಖರೀದಿ ಮಾಡಿದ ಟಿಕೆಟ್‌ಗೆ ಅರುಣ್ ಈ ಭಾರೀ ಮೊತ್ತ ಗೆದ್ದುಕೊಂಡಿದ್ದಾರೆ.