ಹೈದರಾಬಾದ್:ಅಮಾವಾಸ್ಯೆಯಂದು 8 ವರ್ಷದ ಬಾಲಕನನ್ನು ಮಂಗಳಮುಖಿ ಕೊಂದಿರುವ ಸುದ್ದಿ ಇದೀಗ ಸಂಚಲನ ಸೃಷ್ಟಿಸುತ್ತಿದೆ.
ನರಬಲಿ ಎಂದು ಶಂಕಿಸಲಾಗಿರುವ ಪ್ರಕರಣದಲ್ಲಿ ಗುರುವಾರ ಮಗ್ರಿಬ್ ನಮಾಜ್ ಮಾಡಲು ತನ್ನ ಮನೆಯಿಂದ ಹೊರಬಂದ ಎಂಟು ವರ್ಷದ ಅಬ್ದುಲ್ ವಹೀದ್ ಖಾನ್ ಎಂಬ ಬಾಲಕನನ್ನು 35 ವರ್ಷದ ನೆರೆಹೊರೆಯವರಾದ ಇಮ್ರಾನ್ ಅಲಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.ಇಮ್ರಾನ್ ಅಲಿ ಫಿಜಾ ಜಹಾನ್ ಎಂದೂ ಬದಲಾಗಿದ್ದ ಆತ ಓರ್ವ ತೃತೀಯಲಿಂಗಿ ಎಂದೂ ಹೇಳಲಾಗಿದೆ.
ಸನತ್‌ನಗರದ ಅಲ್ಲಾವುದ್ದೀನ್ ಕೋಟಿ ನಿವಾಸಿ 3ನೇ ತರಗತಿ ವಿದ್ಯಾರ್ಥಿಯಾಗಿ ವಹೀದ್ ಖಾನ್ ಗುರುವಾರದಂದು ಕೊನೆಯ ಪರೀಕ್ಷೆ ಬರೆದು ಮನೆಗೆ ಮರಳಿದ್ದ.ಅಜ್ಜಿ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಉತ್ತಮ ಆರೋಗ್ಯಕ್ಕೆ ಪ್ರಾರ್ಥನೆಗೆ ಮತ್ತು ಪರೀಕ್ಷೆಯಲ್ಲಿ ಅಂಕಗಳಿಸುವಂತೆ ದುವಾ ಮಾಡುವುದಾಗಿ ಮನೆಯಲ್ಲಿ ಹೇಳಿ ತೆರಳಿದ್ದ.ಬಾಲಕ ಗುರುವಾರ ರಾತ್ರಿ 8 ಗಂಟೆಯಾದರೂ ಮನೆಗೆ ಬಾರದಿದ್ದಾಗ ಆತಂಕಗೊಂಡು ಹುಡುಕಾಟ ನಡೆಸಿದ್ದಾರೆ.ಬಳಿಕ ಪೊಲೀಸರಿಗೆ ವಿಷಯ ತಿಳಿಸಿದ್ದು ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಶುಕ್ರವಾರ ಮುಂಜಾನೆ ಮೂಸಾಪೇಟೆಯ ಚರಂಡಿಯಲ್ಲಿ ಗೋಣಿಚೀಲದಲ್ಲಿ ಸುತ್ತಿ ಪ್ಲಾಸ್ಟಿಕ್ ಪಾತ್ರೆಯಲ್ಲಿ ತುಂಬಿದ್ದ ಶವ ಪತ್ತೆಯಾಗಿದೆ.
ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿಗಳನ್ನು ಪರಿಶೀಲಿಸಿದರು ಮತ್ತು ಬಾಲಕ ಅಬ್ದುಲ್, ಇಮ್ರಾನ್‌ನ ಮನೆಗೆ ಪ್ರವೇಶಿಸುತ್ತಿರುವುದು ಕಂಡುಬಂದಿದೆ ಆದರೆ ಅವನು ಮನೆಯಿಂದ ಹೊರಗೆ ಹೋಗಲಿಲ್ಲ.ಬಾಲಕ ಆರೋಪಿಯ ನಿವಾಸಕ್ಕೆ ಹೋಗುವಲ್ಲೆ ಪ್ರವೇಶ ದ್ವಾರದಲ್ಲಿ ಆಟೋರಿಕ್ಷಾವೊಂದು ಕಾದು ನಿಂತಿದ್ದು, ಇಮ್ರಾನ್ ಏನನ್ನೋ ಹೊತ್ತೊಯ್ದು ಆಟೋರಿಕ್ಷಾಕ್ಕೆ ತುಂಬಿಸುತ್ತಿರುವುದು ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪೊಲೀಸರು ಇಮ್ರಾನ್‌ನನ್ನು ವಿಚಾರಣೆಗೊಳಪಡಿಸಿದ್ದು, ಅಬ್ದುಲ್‌ನನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಬೋರಬಂಡದ ಮೊಹಮ್ಮದ್ ಎಂಬ ಆಟೋಡ್ರೈವರ್ ಸಹಾಯದಿಂದ ಶವವನ್ನು ನಾಲಾದಲ್ಲಿ ಎಸೆದಿರುವುದಾಗಿ ಇಮ್ರಾನ್ ಹೇಳಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿ ಇಮ್ರಾನ್ ಮತ್ತು ರಫೀಕ್ ಅವರನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಐಪಿಸಿ ಸೆಕ್ಷನ್ 302 ಮತ್ತು 201 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇಮ್ರಾನ್ ಒಆರ್‌ಎಸ್ ಪ್ಯಾಕೆಟ್ ತೆಗೆದುಕೊಂಡು ಹೋದಾಗ ಅಬ್ದುಲ್ ನ್ನು ಕತ್ತು ಹಿಸುಕಿದ್ದಾನೆ ಎಂದು ಸಂತ್ರಸ್ತೆಯ ಕುಟುಂಬ ಹೇಳಿಕೊಂಡಿದೆ. ಬಾಲಕನ ಕುಟುಂಬವು ನರಬಲಿ ಎಂದು ಹೇಳಿಕೊಂಡಿದೆ, ಆದರೆ ಪೊಲೀಸರು ಇಮ್ರಾನ್ ಮತ್ತು ಸಿದ್ಧ ಉಡುಪುಗಳ ವ್ಯಾಪಾರವನ್ನು ನಡೆಸುತ್ತಿರುವ ಅಬ್ದುಲ್ ಅವರ ತಂದೆ ವಸೀಮ್ ಖಾನ್ ನಡುವಿನ ಹಣಕಾಸಿನ ವಿವಾದದಿಂದಾಗಿ ಕೊಲೆ ನಡೆದಿದೆ ಎಂದು ಹೇಳಿದ್ದಾರೆ.