ರಾಜ್ಯಸಭೆಗೆ ಟೊಮೆಟೊ ಹಾರ ಧರಿಸಿ ದಿಢೀರ್ ಪ್ರವೇಶಿಸಿದ ಸಂಸದ; ಆಕ್ಷೇಪ ವ್ಯಕ್ತಪಡಿಸಿ ಸಭಾಧ್ಯಕ್ಷರು ಹೇಳಿದ್ದೇನು ಗೊತ್ತಾ?

ನವದೆಹಲಿ;ರಾಜ್ಯಸಭೆಗೆ ಟೊಮೆಟೊ ಹಾರವನ್ನು ಹಾಕಿಕೊಂಡು ಎಎಪಿ ಸಂಸದ ಆಗಮಿಸಿದ್ದು, ಸ್ಪೀಕರ್ ಇದಕ್ಕೆ ಆಕ್ಷೇಪಿಸಿದ್ದಾರೆ‌.

ಸಂಸದ ಸುಶೀಲ್ ಬೆಲೆ ಏರಿಕೆಯನ್ನು ಪ್ರತಿಭಟಿಸಿ
ರಾಜ್ಯಸಭೆಯಲ್ಲಿ ಕೆಲವು ಅಧಿಕೃತ ದಾಖಲೆಗಳನ್ನು ಮಂಡಿಸುವಾಗ ಗುಪ್ತಾ ಅವರು ಟೊಮೆಟೊ ಹಾಗೂ ಶುಂಠಿಯ ಹಾರ ಧರಿಸಿ ಸದನಕ್ಕೆ ಪ್ರವೇಶಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷ ಜಗದೀಪ್ ಧನಕರ್, ಅವರ ವರ್ತ‌ನೆಯಿಂದ ನನಗೆ ಬೇಸರವಾಗಿದೆ.ಈ ಬಗ್ಗೆ ಯಾವ ಕ್ರಮ ತೆಗೆದುಕೊಳ್ಳಬಹುದು ಎಂದು ನಾನು ಆಡಳಿತ ಹಾಗೂ ವಿರೋಧ ಪಕ್ಷದ ನಾಯಕರ ಜೊತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ ಎಎಪಿ, ಮೋದಿಯ ಹಣದುಬ್ಬರ ಬಡ ಜನರ ರಕ್ತ ಹೀರುತ್ತಿದೆ.ಎಎಪಿ ಶಾಸಕರು ಟೊಮೆಟೊ ಮತ್ತು ಶುಂಠಿಯ ಹಾರವನ್ನು ಹಾಕಿ ಪಾರ್ಲಿಮೆಂಟ್ ಗೆ ಪ್ರವೇಶಿಸಿರುವುದು ಬೆಲೆಯೇರಿಕೆ ವಿರುದ್ಧ ಪ್ರತಿಭಟಿಸಿ ಗಮನ ಸೆಳೆಯಲು ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್