ಉಡುಪಿ; ತಾಯಿ ಮಕ್ಕಳ ಕೊಲೆ ಪ್ರಕರಣ; ಕೊನೆಗೂ ಆರೋಪಿ ಅರೆಸ್ಟ್

ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದ್ದು ಕೊಲೆ ಆರೋಪಿಯನ್ನು ಉಡುಪಿ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ. ಬೆಳಗಾವಿಯ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿಯಲ್ಲಿ ಪ್ರವೀಣ್ ಅರುಣ್ ಚೌಗಲೆ(35) ಎಂಬಾತನನ್ನು ಬಂಧಿಸಿರುವುದಾಗಿ ವರದಿಯಾಗಿದೆ. ಈತ ಮಹಾರಾಷ್ಟ್ರದ ಸಾಂಗ್ಲಿ ಮೂಲದವ ಎಂದು ತಿಳಿದು ಬಂದಿದೆ. ಸಿಆರ್‌ಪಿಎಫ್‌ ಸಿಬ್ಬಂದಿಯಾಗಿದ್ದ ಪ್ರವೀಣ್ ಅರುಣ್ ಚೌಗಲೆ ಮಂಗಳೂರು ಏರ್‌ಪೋರ್ಟಿನಲ್ಲಿ ಕೆಲಸ ಮಾಡುತ್ತಿದ್ದ ಎಂದು ಪ್ರಾಥಮಿಕ ಮಾಹಿತಿ ದೊರಕಿದೆ. ಈತನ ಮೊಬೈಲ್ ಟವರ್ ಆಧರಿಸಿ ಕುಡಚಿಯಲ್ಲಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. … Read more

ನೇಜಾರು; ತಾಯಿ ಮಕ್ಕಳ ಕೊಲೆ ಪ್ರಕರಣ; ತೀವ್ರಗೊಂಡ ತನಿಖೆ

ಸಂತೆಕಟ್ಟೆಯ ನೇಜಾರಿನಲ್ಲಿ ತಾಯಿ- ಮಕ್ಕಳ ಬರ್ಬರ ಹತ್ಯೆ ಪ್ರಕರಣದ ತನಿಖೆ ಮುಂದುವರಿದಿದೆ. ಪ್ರಕರಣಕ್ಕೆ ಸಂಬಂದಿಸಿ ಈಗಾಗಲೇ ಪೊಲೀಸರು ಹಲವು ಸಂಶಯಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಗೃಹ ಸಚಿವ ಪರಮೇಶ್ವರ್ ಅವರು ಪೋನ್ ಕರೆ ಮೂಲಕ ಮನೆಯ ಯಜಮಾನ ನೂರ್ ಮಹಮ್ಮದ್ ಅವರ ಜೊತೆ ಮಾತನಾಡಿದ್ದಾರೆ. ಆರೋಪಿಯನ್ನು ಶೀಘ್ರವೇ ಬಂದಿಸಿ ಜನರನ್ನು ಭಯದಿಂದ ಮುಕ್ತಿಗೊಳಿಸಿ, ಸ್ಥಳೀಯರು ಈ ಘಟನೆಯ ಬಳಿಕ ದೀಪಾವಳಿಯನ್ನು ಕೂಡಾ ಆಚರಣೆ ಮಾಡಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಅವರಲ್ಲಿ … Read more

ಗಾಝಾದ ಅಲ್ ಶಿಫಾ ಆಸ್ಪತ್ರೆಯ ಆವರಣದಲ್ಲೇ ನೂರಾರು ಮಂದಿಯ ಸಾಮೂಹಿಕ ಸಮಾಧಿ

ಗಾಝಾದ ಅತಿದೊಡ್ಡ ಅಲ್ ಶಿಫಾ ಆಸ್ಪತ್ರೆಯಲ್ಲಿ ಶಿಶುಗಳು ಸೇರಿದಂತೆ 179 ಜನರನ್ನು ಆಸ್ಪತ್ರೆಯ ಆವರಣದೊಳಗೆ ಸಾಮೂಹಿಕ ಸಮಾಧಿ ಮಾಡಲಾಗಿದೆ ಎಂದು ಅಲ್ ಶಿಫಾ ಆಸ್ಪತ್ರೆಯ ಮುಖ್ಯಸ್ಥ ಮೊಹಮ್ಮದ್ ಅಬು ಸಲ್ಮಿಯಾ ಹೇಳಿದ್ದಾರೆ. ಅಲ್ ಶಿಫಾ ಆಸ್ಪತ್ರೆಯಲ್ಲಿನ ಮಾನವೀಯ ಬಿಕ್ಕಟ್ಟನ್ನು ಅಬು ಸಲ್ಮಿಯಾ ಒತ್ತಿಹೇಳಿದ್ದು, ನಾವು ಅವರನ್ನು ಸಾಮೂಹಿಕವಾಗಿ ಸಮಾಧಿ ಮಾಡಿದ್ದೇವೆಂದು ಹೇಳಿದ್ದಾರೆ. ಆಸ್ಪತ್ರೆಯಲ್ಲಿ ಇಂಧನ ಕೊರತೆ ನಂತರ ತೀವ್ರ ನಿಗಾ ಘಟಕದಲ್ಲಿ 7 ಶಿಶುಗಳು ಮತ್ತು 29 ಇತರರು ಮೃತಪಟ್ಟಿದ್ದು ಅವರನ್ನು ಕೂಡ ಆಸ್ಪತ್ರೆ ಕಾಂಪ್ಲೆಕ್ಸ್‌ನಲ್ಲಿ ಸಮಾಧಿ … Read more

ಉಡುಪಿ; ದೀಪಾವಳಿ ಪ್ರಯುಕ್ತ ಬಾವಿಗೆ ದೀಪ ಇಡಲು ಹೋದ ಯುವಕ ಬಾವಿಗೆ ಬಿದ್ದು ಮೃತ್ಯು

ಹೆಬ್ರಿ:ದೀಪಾವಳಿ ಹಬ್ಬದ ಪ್ರಯುಕ್ತ ಬಾವಿಗೆ ದೀಪ ಇಡಲು ಹೋದ ಯುವಕ ಬಾವಿಗೆ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ. ಹೆಬ್ರಿ ತಾಲೂಕು ಚಾರ ಗ್ರಾಮದ ಚಾರ ಬಸದಿ ಬಳಿ ನಿವಾಸಿ ಸಚಿನ್‌(35)ಮೃತರು. ಆವರಣವಿಲ್ಲದ ಬಾವಿ ಬಳಿ ದೀಪ ಇಡುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಯ ನೀರಿಗೆ ಬಿದ್ದು ಸಚಿನ್ ಮೃತಪಟ್ಟಿದ್ದಾರೆ. ಹೆಬ್ರಿ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಗಾಝಾ ಮೇಲೆ ದಾಳಿಗೆ ಇಸ್ರೇಲ್ ಗೆ ಬೆಂಬಲಿಸಿದ್ದಕ್ಕೆ ಅಮೆರಿಕಾದ ದೀಪಾವಳಿ ಪಾರ್ಟಿ ಆಹ್ವಾನ ತಿರಸ್ಕರಿಸಿದ ಕವಯಿತ್ರಿ

ಗಾಝಾದ ಮೇಲೆ ಇಸ್ರೇಲ್‌ ಘೋಷಿಸಿದ ಯುದ್ಧವನ್ನು ಅಮೆರಿಕ ಬೆಂಬಲಿಸಿದ್ದಕ್ಕೆ, ಭಾರತೀಯ ಮೂಲದ ಕವಯಿತ್ರಿ ರೂಪಿ ಕೌರ್ ಅವರು ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕಳುಹಿಸಿದ ದೀಪಾವಳಿ ಪಾರ್ಟಿಯ ಆಹ್ವಾನವನ್ನು ತಿರಸ್ಕರಿಸಿದ್ದಾರೆ. ಗಾಝಾದ ಮೇಲಿನ ಇಸ್ರೇಲ್‌ ದಾಳಿಯ ವೇಳೆ ಯುದ್ಧವನ್ನು ಅಮೆರಿಕ ಬೆಂಬಲಿಸಿರುವುದು, ಇಂತಹ ಸನ್ನಿವೇಶದಲ್ಲಿ ದೀಪಾವಳಿ ಆಚರಿಸುವುದು ಅಚ್ಚರಿ ತಂದಿದೆ ರೂಪಿ ಕೌರ್ ಅವರು ಹೇಳಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಕೆನಡಾದ ಬರಹಗಾರ್ತಿ ರೂಪಿ ಕೌರ್ ಬರೆದುಕೊಂಡಿದ್ದು, ನಾಗರಿಕರ ಮೇಲಿನ ಅದರಲ್ಲೂ 50% ಮಕ್ಕಳ ಸಾಮೂಹಿಕ ಶಿಕ್ಷೆಯನ್ನು … Read more