ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ನೇಮಕ

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹುದ್ದೆಗೆ ಬಿ.ವೈ.ವಿಜಯೇಂದ್ರ ಅವರನ್ನು ನೇಮಕ ಮಾಡಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆದೇಶಿಸಿದ್ದಾರೆ. ಶಿಕಾರಿಪುರ ಕ್ಷೇತ್ರದ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ ಅವರನ್ನು ಕರ್ನಾಟಕ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಕರ್ನಾಟಕದಲ್ಲಿ ಕಳೆದ ಕೆಲವು ತಿಂಗಳಿನಿಂದ ಭಾರೀ ಚರ್ಚೆಗೆ ಕಾರಣವಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಇದೀಗ ಕೊನೆಗೂ ನೇಮಕವಾಗಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರೇ ಕರ್ನಾಟಕ ಬಿಜೆಪಿಯ … Read more

ಪುತ್ತೂರು; ಪುತ್ತಿಲ ಪರಿವಾರ ಕಚೇರಿಯ ಮುಂದೆ ತಳವಾರು ಝಳಪಿಸಿದ ತಂಡ ಅರೆಸ್ಟ್..

ಪುತ್ತೂರು: ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರ ಪುತ್ತಿಲ ಪರಿವಾರದ ಕಚೇರಿಯ ಮುಂಭಾಗದಲ್ಲಿ ಯುವಕನೋರ್ವ ನಾಲ್ವರು ಸಹಚರರೊಂದಿಗೆ ತಲವಾರು ಹಿಡಿದುಕೊಂಡು ಆಗಮಿಸಿದ್ದು,ಸ್ಥಳಕ್ಕೆ ಪುತ್ತೂರು ನಗರ ಠಾಣಾ ಪೊಲೀಸರು ಆಗಮಿಸಿ ತಂಡವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಪುತ್ತೂರು ಶಾಂತಿಗೋಡು ಗ್ರಾಮದ ದಿನೇಶ ಪಂಜಿಗ (38), ನರಿಮೊಗರು ಗ್ರಾಮದ ಭವಿತ್ (19), ಬೊಳ್ವಾರು ನಿವಾಸಿ ಮನ್ವಿತ್ (19), ಆರ್ಯಾಪು ಗ್ರಾಮದ ಜಯಪ್ರಕಾಶ (18), ಚಿಕ್ಕಮುಡ್ನೂರು ಗ್ರಾಮದ ಚರಣ್ (23), ಪುತ್ತೂರು ಬನ್ನೂರು ಗ್ರಾಮದ ಮನೀಶ (23), … Read more

ಮಲಯಾಳಂ ನಟ ಮಹಮ್ಮದ್ ಹನೀಫ್ ನಿಧನ

ತಿರುವನಂತಪುರಂ: ಖ್ಯಾತ ಮಲಯಾಳಂ ನಟ, ಮಿಮಿಕ್ರಿ ಕಲಾವಿದ ಕಲಾಭವನ್ ಮುಹಮ್ಮದ್ ಹನೀಫ್ ಅವರು ಕೊಚ್ಚಿಯಲ್ಲಿ ನಿಧನರಾಗಿದ್ದಾರೆ. 63 ವರ್ಷದ ಹನೀಫ್ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು ಅವರನ್ನು ಎರ್ನಾಕುಲಂನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ನೀಡಲಾಗಿತ್ತು. ಎರ್ನಾಕುಲಂ ಜಿಲ್ಲೆಯ ಮತ್ತಂಚೇರಿಯ ಹಮ್ಜಾ ಹಾಗೂ ಜುಬೈದಾ ದಂಪತಿಯ ಪುತ್ರ ಹನೀಫ್. ಮೂಕಾಭಿನಯ ನಟರಾಗಿದ್ದರು ಅವರು ನಾಟಕಗಳ ಮೂಲಕ ತಮ್ಮ ನಟನಾ ವೃತ್ತಿಯನ್ನು ಆರಂಭಿಸಿದ್ದರು. ಅಲ್ಲದೇ ಹನೀಫ್ ಅವರು ಕೇರಳ ರಾಜ್ಯದಲ್ಲಿ ಮಿಮಿಕ್ರಿ ಕಲೆಯನ್ನು ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರಸಿದ್ಧ … Read more

ಬರ ಅಧ್ಯಾಯನಕ್ಕೆ ತೆರಳಿ ಕೈಕೈ ಮಿಲಾಯಿಸಿಕೊಂಡ ಬಿಜೆಪಿ ನಾಯಕರು

ರಾಜ್ಯಾದ್ಯಂತ ಬಿಜೆಪಿ ನಾಯಕರು ಬರ ಅಧ್ಯಯನ ಪ್ರವಾಸ ಕೈಗೊಂಡಿದ್ದಾರೆ. ಬರ ಅಧ್ಯಯನಕ್ಕೆಂದು ಆಗಮಿಸಿದ್ದ ಬಿಜೆಪಿ ನಾಯಕರ ನಡುವೆಯೇ ಗಲಾಟೆ ನಡೆದು ಕೈಕೈ ಮಿಲಾಯಿಸಿಕೊಂಡಿರುವ ಘಟನೆ ರಾಮನಗರದಲ್ಲಿ ನಡೆದಿದೆ. ರಾಮನಗರ ಜಿಲ್ಲೆಯ ವಿಭೂತಿಕೆರೆ ಗ್ರಾಮಕ್ಕೆ ಮಾಜಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ನೇತೃತ್ವದ ತಂಡ ಬರ ಅಧ್ಯಯನಕ್ಕೆ ಭೇಟಿ ನೀಡಿದೆ.ಬರ ಅಧ್ಯಯನಕ್ಕೆಂದು ಬಂದವರು ರೈತರ ಸಂಕಷ್ಟ ಆಲಿಸುವುದು ಬಿಟ್ಟು ಗಲಾಟೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಎಂಎಲ್ ಸಿ ಆ.ದೇವೇಗೌಡ, ಚನ್ನಪಟ್ಟಣ ತಾಲೂಕು ಘಟಕದ ಅಧ್ಯಕ್ಷ ಜಯರಾಂ ನಡುವೆ ವೈಯಕ್ತಿಕ … Read more

ಭೀಕರ ಅಪಘಾತ; ಮಗು ಸೇರಿ ಒಂದೇ ಕುಟುಂಬದ 6 ಜನರು ದುರ್ಮರಣ

-ಬೀಬಿ ಫಾತಿಮಾ,ನಜ್ಜಿನ್ ಬೇಗಂ,ಅಬೂಬಕ್ಕರ್,ಬೀಬಿ ಮರಿಯಮ್,ಹಮ್ಮದ್ ಪಾಷಾ, ಬಾಬಾ ಮೃತರು. ಕಲಬುರಗಿ:ಟಂಟಂ ಹಾಗೂ ಟ್ಯಾಂಕರ್ ಮಧ್ಯೆ ಡಿಕ್ಕಿಯಾಗಿ ಮೂರು ತಿಂಗಳ ಮಗು ಸೇರಿ ಒಂದೇ ಕುಟುಂಬದ 6 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರ್ಟಿ ಸಮೀಪ ರಾಷ್ಟ್ರೀಯ ಹೆದ್ದಾರಿ ಬಳಿ ನಡೆದಿದೆ. ಘಟನೆಯಲ್ಲಿ ನಜ್ಜಿನ್ ಬೇಗಂ(28), ಬೀಬಿ ಫಾತಿಮಾ (12),ಅಬೂಬಕ್ಕರ್ (4), ಬೀಬಿ ಮರಿಯಮ್ ( 3 ತಿಂಗಳ ಮಗು), ಹಮ್ಮದ್ ಪಾಷಾ (20), ಆಟೋ ಚಾಲಕ ಬಾಬಾ (35) ಸ್ಥಳದಲ್ಲೇ ಮೃತಪಟ್ಟಿದ್ದಾರೆ. … Read more